ರಾಜಸ್ಥಾನ: ಆಸ್ಪತ್ರೆ ಆವರಣದಲ್ಲಿ ಭ್ರೂಣವನ್ನು ಕಚ್ಚಿ ತಿರುಗಾಡಿದ ಬೀದಿನಾಯಿ; ತನಿಖೆ ಆರಂಭಿಸಿದ ಪೊಲೀಸರು

Update: 2022-11-22 12:41 GMT

ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರದ ಸರ್ಕಾರಿ ಆಸ್ಪತ್ರೆಯಲ್ಲಿ ರವಿವಾರ ಗಂಭೀರ ನಿರ್ಲಕ್ಷದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಸತ್ತ ಭ್ರೂಣವೊಂದನ್ನು ನಾಯಿಯೊಂದು ಕಚ್ಚಿ ತಿರುಗಾಡುತ್ತಿರುವುದು ಕಂಡುಬಂದಿದೆ.

ರವಿಅರ ಸಂಜೆ ಜೈಪುರ ಜಿಲ್ಲೆಯ ಸಂಗನೇರಿ ಗೇಟ್‌ನಲ್ಲಿರುವ ಮಹಿಳಾ ಆಸ್ಪತ್ರೆಯ ಗೇಟ್ ನಂ. 1 ರ ಹೊರಗೆ ಭ್ರೂಣವನ್ನು ಕಚ್ಚಿ ಹಿಡಿದಿರುವ ಬೀದಿ ನಾಯಿಯು ಮೊದಲು ಕಾಣಿಸಿಕೊಂಡಿದೆ. ಜನರು ನಾಯಿಯನ್ನು ಹಿಡಿಯಲು ಪ್ರಯತ್ನಿಸಿದಾಗ ಅದು ಭ್ರೂಣವನ್ನು ಆಮ್ಲಜನಕ ಘಟಕದ ಬಳಿ ಬಿಟ್ಟು ಆಸ್ಪತ್ರೆಯ ಗೋಡೆಯ ಮೇಲೆ ಏರಿ ಕುಳಿತಿದೆ ಎಂದು indiatoday.in ವರದಿ ಮಾಡಿದೆ.

ಈ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿ ಲಾಲ್ ಕೋಠಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಸೋಮವಾರ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಪೊಲೀಸರು ಭ್ರೂಣವನ್ನು ವಿಲೇವಾರಿ ಮಾಡಿದ್ದಾರೆ. ಅದು ಎಂಟು ತಿಂಗಳ ಗಂಡು ಭ್ರೂಣವೆಂದು ವರದಿಯಾಗಿದೆ.

ಮೃತ ಮಗುವಿನ ಕುಟುಂಬದವರಿಗಾಗಿ ಪೊಲೀಸರು ಹುಡುಕಾಟವನ್ನೂ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಭ್ರೂಣವು ಆಸ್ಪತ್ರೆಯಲ್ಲಿಯೇ ಮೃತಪಟ್ಟಿರಬಹುದು ಎನ್ನಲಾಗಿದೆ. ಸತ್ತ ಭ್ರೂಣವನ್ನು ಕುಟುಂಬಸ್ಥರು ಸಮೀಪದೆಲ್ಲೋ ಹೂತಿರಬಹುದು. ನಂತರ ನಾಯಿ ಅದನ್ನು ಅಗೆದಿರಬಹುದು ಎಂದು ಊಹಿಸಲಾಗಿದೆ.

Similar News