×
Ad

ವಿನಾಕಾರಣ ಬಂಧನ ನ್ಯಾಯಾಂಗ ವ್ಯವಸ್ಥೆಗೆ ಹೊರೆ: ಮಾಜಿ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್

Update: 2022-11-22 22:01 IST

ಹೊಸದಿಲ್ಲಿ, ನ. 22: ವಿನಾಕಾರಣ ಬಂಧನ ನ್ಯಾಯಾಂಗ ವ್ಯವಸ್ಥೆಗೆ ಹೊರೆಯಾಗುತ್ತಿದೆ ಎಂದು ಮಾಜಿ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್(U.U. Lalit) ಅವರು ಮಂಗಳವಾರ ಹೇಳಿದ್ದಾರೆ.

ಬಾಂಬೆ ಉಚ್ಚ ನ್ಯಾಯಾಲಯಲ್ಲಿ ನಿವೃತ್ತ ನ್ಯಾಯಮೂರ್ತಿ ಕೆ.ಟಿ. ದೇಸಾಯಿ (KT Desai)ಸ್ಮಾರಕ ಉಪನ್ಯಾಸದಲ್ಲಿ ‘‘ಅಪರಾಧ ನ್ಯಾಯವನ್ನು ಪರಿಣಾಮಕಾರಿ ಮಾಡುವುದು ಹೇಗೆ ?’’ ಎಂಬ ಕುರಿತು ಅವರು ಮಾತನಾಡಿದರು.

ಇತ್ತೀಚೆನ ದಿನಗಳಲ್ಲಿ ಆಗಾಗ, ಸಮರ್ಪಕ ಕಾರಣಗಳಿಲ್ಲದೆ ಬಂಧನಗಳು ನಡೆಯುತ್ತಿವೆ ಎಂದು ಅವರು ಅಭಿಪ್ರಾಯಿಸಿದರು.

‘‘ವಾಸ್ತವವಾಗಿ ಅಗತ್ಯ ಇದೆಯೇ ಎಂಬುದನ್ನು ಗಮನಿಸದೇ  ಬಂಧಿಸಲಾಗುತ್ತಿದೆ. ಸಿವಿಲ್ ಪ್ರಕರಣವನ್ನು ಕ್ರಿಮಿನಲ್ ಪ್ರಕರಣವೆಂದು ಬಿಂಬಿಸಲಾಗುತ್ತಿದೆ. ಇದು ನ್ಯಾಯಾಂಗ ವ್ಯವಸ್ಥೆಗೆ ಹೊರೆ ಉಂಟು ಮಾಡುತ್ತದೆ’’ ಎಂದು ಅವರು ಹೇಳಿದರು.

‘‘ಮ್ಯಾಜಿಸ್ಟ್ರೇಟ್ ತೃಪ್ತರಾದ ಬಳಿಕವೇ ರಿಮಾಂಡ್ ನೀಡಬಹುದು.   ಮ್ಯಾಜಿಸ್ಟ್ರೇಟ್ ಯಾಂತ್ರಿಕವಾಗಿ ರಿಮಾಂಡ್ ನೀಡುವುದನ್ನು ನಾವು ಹೆಚ್ಚಿನ ಸಂದರ್ಭಗಳಲ್ಲಿ ನೋಡುತ್ತಿರುತ್ತೇವೆ. ಮುಂದೆ ಯಾವ ತನಿಖೆಯ ಅಗತ್ಯ ಇದೆ? ಎಂದು ಮ್ಯಾಜಿಸ್ಟ್ರೆಟ್ ತನಿಖಾಧಿಕಾರಿಯಲ್ಲಿ ಪ್ರಶ್ನಿಸಿರುವುದನ್ನು ನಾನು ಎಲ್ಲಿಯೂ ನೋಡಿಲ್ಲ್ಲ’’ ಎಂದು ಅವರು ಹೇಳಿದರು.

ಜೈಲಿನ ಒಟ್ಟು ಜನಸಂಖ್ಯೆಯಲ್ಲಿ ಶೇ. 80 ವಿಚಾರಣಾಧೀನ ಕೈದಿಗಳು ಇದ್ದಾರೆ. ದೇಶದಲ್ಲಿ ಶಿಕ್ಷೆಯ ಪ್ರಮಾಣ ಶೇ. 27 ಇದೆ ಎಂದು ಅವರು ತಿಳಿಸಿದರು.

ತನಿಖಾ ಸಂಸ್ಥೆಗಳು ಸಂಪೂರ್ಣ ಸ್ವತಂತ್ರ್ಯ ಹಾಗೂ ವೃತ್ತಿಪರ ಆಗುವ ಅಗತ್ಯತೆ ಇದೆ. ತನಿಖಾ ಸಂಸ್ಥೆಗಳು  ಸಂಪೂರ್ಣವಾಗಿ ವೈಜ್ಞಾನಿಕ ವಿಧಾನ ಕ್ರಮವನ್ನು, ತನಿಖೆಯಲ್ಲಿ ಅತ್ಯುತ್ತಮ ವಿಧಾನ ಕ್ರಮವನ್ನು ಅನುಸರಿಸುವ ಅಗತ್ಯತೆ ಇದೆ ಎಂದು ಯು.ಯು. ಲಲಿತ್ ಅವರು ಹೇಳಿದರು.

Similar News