ಅಮೆರಿಕದ ವಾಲ್‌ಮಾರ್ಟ್ ಅಂಗಡಿಯಲ್ಲಿ ಬಂದೂಕುದಾರಿಯ ಗುಂಡಿನ ದಾಳಿಗೆ ಹಲವರು ಮೃತ್ಯು

Update: 2022-11-23 06:14 GMT

ನ್ಯೂಯಾರ್ಕ್ : ಅಮೆರಿಕದ ವರ್ಜೀನಿಯಾ ರಾಜ್ಯದಲ್ಲಿ ಮಂಗಳವಾರ ತಡರಾತ್ರಿ ವಾಲ್‌ಮಾರ್ಟ್ ಅಂಗಡಿಯಲ್ಲಿ ಬಂದೂಕುಧಾರಿಯೊಬ್ಬ ಅನೇಕ ಜನರನ್ನು ಗುಂಡಿಕ್ಕಿ ಕೊಂದಿದ್ದಾನೆ. ಬಂದೂಕುಧಾರಿ  ಕೂಡ ಸಾವನ್ನಪ್ಪಿದ್ದಾನೆ ಎಂದು ನಗರ ಅಧಿಕಾರಿಗಳು ತಿಳಿಸಿದ್ದಾರೆ.

"ಸ್ಯಾಮ್ಸ್ ಸರ್ಕಲ್‌ನಲ್ಲಿರುವ ವಾಲ್‌ಮಾರ್ಟ್‌ನಲ್ಲಿ ಹಲವು ಸಾವು-ನೋವಿಗೆ ಕಾರಣವಾಗಿರುವ  ಘಟನೆಯನ್ನು ಚೆಸಾಪೀಕ್ ಪೊಲೀಸರು ಖಚಿತಪಡಿಸಿದ್ದಾರೆ. ಶೂಟರ್ ಸಾವನ್ನಪ್ಪಿದ್ದಾರೆ" ಎಂದು ಚೆಸಾಪೀಕ್ ಸಿಟಿ  ಟ್ವಿಟರ್‌ನಲ್ಲಿ ತಿಳಿಸಿದೆ.

Similar News