ಚುನಾವಣಾ ಆಯೋಗದ ಸ್ವಾತಂತ್ರ್ಯಕ್ಕೆ ಸರಕಾರ ಅಡ್ಡಿಪಡಿಸಿದೆ: ಸುಪ್ರೀಂ ಕೋರ್ಟ್

Update: 2022-11-23 09:47 GMT

ಹೊಸದಿಲ್ಲಿ: ಚುನಾವಣಾ ಆಯುಕ್ತರ  ಸ್ವಾತಂತ್ರ್ಯದ ಬಗ್ಗೆ ಸರಕಾರವು ಬಾಯಿಮಾತಿನಲ್ಲಿ ಮಾತ್ರ ಹೇಳುತ್ತಿದೆ. ಇದು ಆಯುಕ್ತರ ಅಧಿಕಾರಾವಧಿಯ ಅವಧಿಯಿಂದ ಸ್ಪಷ್ಟವಾಗಿದೆ ಎಂದು  ಸುಪ್ರೀಂ ಕೋರ್ಟ್ ಮಂಗಳವಾರ ಟೀಕಿಸಿದೆ ಎಂದು The Hindu ವರದಿ ಮಾಡಿದೆ.

ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ನೇತೃತ್ವದ ಸಾಂವಿಧಾನಿಕ ಪೀಠವು ಚುನಾವಣಾ ಸಮಿತಿಯ ಕ್ರಿಯಾತ್ಮಕ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳಲು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸುತ್ತಿದೆ.

ಮುಖ್ಯ ಚುನಾವಣಾ ಆಯುಕ್ತರ ಅಧಿಕಾರಾವಧಿಯು 1950 ರ ದಶಕದಲ್ಲಿ ಎಂಟು ವರ್ಷಗಳಿಗಿಂತ ಹೆಚ್ಚು ಕಡಿಮೆಯಾಗಿದೆ.  2004 ರ ನಂತರ ಕೆಲವೇ ನೂರು ದಿನಗಳಿಗೆ ಇಳಿದಿದೆ. 1996 ರಿಂದ ಯಾವುದೇ ಮುಖ್ಯ ಚುನಾವಣಾ ಆಯುಕ್ತರಿಗೆ ಆರು ವರ್ಷಗಳ ಪೂರ್ಣಾವಧಿಯನ್ನು ಪೂರೈಸಲು ಸಾಧ್ಯವಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ ಎಂದು  Hindustan Times ವರದಿ ಮಾಡಿದೆ.

ಸಂವಿಧಾನದ 324(2)ನೇ ಪರಿಚ್ಛೇದದ ಆದೇಶ ಹಾಗೂ  1990 ರಲ್ಲಿ ದಿನೇಶ್ ಗೋಸ್ವಾಮಿ ಸಮಿತಿಯ ಶಿಫಾರಸುಗಳ ಹೊರತಾಗಿಯೂ ಚುನಾವಣಾ ಆಯೋಗಕ್ಕೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡಲು  ಸಂಸತ್ತು ಚುನಾವಣಾ ಆಯುಕ್ತರನ್ನು ನೇಮಿಸಲು ಕಾನೂನನ್ನು ರೂಪಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ. ಆರ್ಟಿಕಲ್ 324(2) ಸಂಸತ್ತಿಗೆ ಮುಖ್ಯ ಚುನಾವಣಾ ಆಯುಕ್ತರು ಹಾಗೂ  ಇತರ ಚುನಾವಣಾ ಆಯುಕ್ತರ ನೇಮಕಾತಿಗೆ ಕಾನೂನು ರೂಪಿಸಲು ಅವಕಾಶ ನೀಡುತ್ತದೆ.

Similar News