ತೆಲಂಗಾಣ ಶಾಸಕರ ಕುದುರೆ ವ್ಯಾಪಾರ: ಸಿಟ್ ತನಿಖೆಗೆ ಒಪ್ಪಿಸುವ ಹೈಕೋರ್ಟ್ ಆದೇಶ ತಳ್ಳಿಹಾಕಿದ ಸುಪ್ರೀಂಕೋರ್ಟ್‌

Update: 2022-11-25 06:08 GMT

ಹೊಸದಿಲ್ಲಿ,ನ.24: ನಾಲ್ವರು ಟಿಆರ್‌ಎಸ್ (TRS)ಶಾಸಕರನ್ನು ಅಪಹರಿಸಲು ಯತ್ನಿಸಿದ ಆರೋಪದ ತನಿಖೆ ನಡೆಸಲು ತೆಲಂಗಾಣ ಪೊಲೀಸರ ವಿಶೇಷ ತನಿಖಾ ತಂಡ (ಸಿಟ್)ಗೆ ಅನುಮತಿ ನೀಡುವ ತೆಲಂಗಾಣ ಹೈಕೋರ್ಟ್‌(Telangana High Court)ನ ಆದೇಶವನ್ನು ಸುಪ್ರೀಂಕೋರ್ಟ್(Supreme Court) ತಳ್ಳಿಹಾಕಿದೆ.

ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಬೇಕೆಂದು ಆರೋಪಿಗಳು ಸಲ್ಲಿಸಿದ ಅರ್ಜಿಯ ಪರಿಶೀಲನೆ ನಡೆಸುವಂತೆ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ (B.R. Gawai)ಹಾಗೂ ವಿಕ್ರಮ್ ನಾಥ್(Vikram Nath) ಅವರನ್ನೊಳಗೊಂಡ ನ್ಯಾಯಪೀಠವು ಹೈಕೋರ್ಟ್‌ಗೆ ಸೂಚಿಸಿದೆ.

 ಆದಾಗ್ಯೂ ಪೊಲೀಸರ ಮುಂದೆ ಆರೋಪಿಗಳು ಶರಣಾಗತರಾಗಬೇಕೆಂಬ ಹೈಕೋರ್ಟ್‌ನ ನಿರ್ದೇಶನವನ್ನು ಅದು ತಳ್ಳಿಹಾಕಿದೆ. ಅಲ್ಲದೆ ಒಂದು ವೇಳೆ ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಿದಲ್ಲಿ ಅದನ್ನು ಪರಿಶೀಲಿಸುವಂತೆಯೂ ಅದು ಸೂಚಿಸಿದೆ.

Similar News