ಗೊತಬಯ ರಾಜಪಕ್ಸಗೆ ಲಂಕಾ ಸುಪ್ರೀಂಕೋರ್ಟ್ ಸಮನ್ಸ್

Update: 2022-11-24 18:12 GMT

ಕೊಲಂಬೊ, ನ.24: ಕೊಲೆ ಆರೋಪಿಗೆ ಅಧ್ಯಕ್ಷರ ಕ್ಷಮಾದಾನ ನೀಡಿದ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಶ್ರೀಲಂಕಾದ ಪದಚ್ಯುತ ಅಧ್ಯಕ್ಷ ಗೊತಬಯ ರಾಜಪಕ್ಸ(Gotabaya Rajapaksa)ಗೆ ಅಲ್ಲಿನ ಸುಪ್ರೀಂಕೋರ್ಟ್ ಗುರುವಾರ ಸಮನ್ಸ್ ಜಾರಿಗೊಳಿಸಿದೆ.

ಶ್ರೀಲಂಕಾ ಪೊದುಜನ ಪೆರಮುನ ಪಕ್ಷ(ಎಸ್‍ಎಲ್‍ಪಿಪಿ)ದ ಸಂಸದರಾಗಿದ್ದ ಭರತ ಲಕ್ಷ್ಮಣ ಪ್ರೇಮಚಂದ್ರರನ್ನು 2011ರಲ್ಲಿ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಅದೇ ಪಕ್ಷದ ಮತ್ತೊಂದು ಸಂಸದ ಡುಮಿಂಡಾ ಸಿಲ್ವರ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಸಿಲ್ವಗೆ 2017ರಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. 2021ರಲ್ಲಿ ಅಧ್ಯಕ್ಷರಾಗಿದ್ದ ಗೊತಬಯ ರಾಜಪಕ್ಸ ತನ್ನ ಅಧಿಕಾರ ಬಳಸಿ ಸಿಲ್ವಗೆ ಕ್ಷಮಾದಾನ ಘೋಷಿಸಿ ಬಿಡುಗಡೆಗೊಳಿಸಿದ್ದರು.

ಆದರೆ ರಾಜಪಕ್ಸರ ಆದೇಶವನ್ನು ರದ್ದುಗೊಳಿಸಿದ್ದ ಸುಪ್ರೀಂಕೋರ್ಟ್, ಸಿಲ್ವರನ್ನು ಮತ್ತೆ ಬಂಧಿಸಲು ಸೂಚಿಸಿತ್ತು ಹಾಗೂ ಕ್ಷಮಾದಾನ ನೀಡಿರುವುದನ್ನು ವಿರೋಧಿಸಿ ದಾಖಲಾಗಿರುವ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಗೊತಬಯಗೆ ಸಮನ್ಸ್ ಜಾರಿಗೊಳಿಸಿದೆ.

Similar News