15 ವರ್ಷ ಹಳೆಯ ಸರಕಾರಿ ವಾಹನಗಳು ಗುಜರಿಗೆ: ನಿತಿನ್‌ ಗಡ್ಕರಿ

Update: 2022-11-25 13:41 GMT

ಹೊಸದಿಲ್ಲಿ: 15 ವರ್ಷ ಹಳೆಯ ಸರಕಾರಿ ವಾಹನಗಳನ್ನು ಗುಜರಿಗೆ ನೀಡಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದು, ಈ ಸಂಬಂಧ ರಾಜ್ಯ ಸರ್ಕಾರಗಳಿಗೆ ಸುತ್ತೋಲೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾಳೆ.

ರಸ್ತೆಗಳಲ್ಲಿ ಸಂಚರಿಸುವ 15 ವರ್ಷ ಹಳೆಯ ವಾಹನಗಳನ್ನು ಗುಜರಿಗೆ ಹಾಕುವಂತೆ ರಾಜ್ಯ ಸರಕಾರಗಳಿಗೆ ತಿಳಿಸಲಾಗಿದೆ ಎಂದರು. ಇದು ಬಸ್‌ಗಳು, ಟ್ರಕ್‌ಗಳು ಮತ್ತು ಕಾರುಗಳು ಸೇರಿದಂತೆ ಎಲ್ಲಾ ರೀತಿಯ ವಾಹನಗಳನ್ನು ಒಳಗೊಂಡಿದೆ. ಮಾಲಿನ್ಯವನ್ನು ನಿಗ್ರಹಿಸಲು ಸರ್ಕಾರವು ಈ ವರ್ಷದ ಆರಂಭದಲ್ಲಿ ವಾಹನಗಳನ್ನು ಗುಜರಿಗೆ ನೀಡುವ ಕ್ರಮವನ್ನು ಘೋಷಿಸಿತು.

ಕಳೆದ ತಿಂಗಳು ವಾಹನಗಳ ಹಿಂಬದಿ ಸೀಟಿನಲ್ಲಿ ಕುಳಿತವರಿಗೂ ಸೀಟ್‌ ಬೆಲ್ಟ್‌ ಹಾಕುವ ಪ್ರಮುಖ ಯೋಜನೆಯನ್ನು ಗಡ್ಕರಿ ಘೋಷಿಸಿದ್ದರು. ವಾಹನ ಸ್ಕ್ರಾಪೇಜ್ ನೀತಿಯು ಹಳೆಯ ಮತ್ತು ಯೋಗ್ಯವಲ್ಲದ ವಾಹನಗಳನ್ನು ರಸ್ತೆಗಳಲ್ಲಿ ಆಧುನಿಕ ಮತ್ತು ಹೊಸ ವಾಹನಗಳನ್ನು ಗುಜರಿಗೆ ಹಾಕಬೇಕೆಂದು ಹೇಳುತ್ತದೆ. ಈ ನೀತಿಯು ಏಪ್ರಿಲ್ 1, 2022 ರಂದು ಜಾರಿಗೆ ಬಂದಿದೆ.

Similar News