ಪೂನಾವಾಲಾ ಹೆಸರಲ್ಲಿ ಸೀರಮ್ ಸಂಸ್ಥೆಗೆ 1 ಕೋಟಿ ರೂ. ವಂಚನೆ, 7 ಮಂದಿ ಬಂಧನ

Update: 2022-11-26 09:19 GMT

ಪುಣೆ: ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ (ಎಸ್‌ಐಐ) 1.01 ಕೋಟಿರೂ. ಗೂ ಹೆಚ್ಚು ವಂಚನೆ ಮಾಡಿದ ವಂಚನೆ ಪ್ರಕರಣದಲ್ಲಿ ಏಳು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪುಣೆ ಪೊಲೀಸರು ಇಂದು ತಿಳಿಸಿದ್ದಾರೆ.

ದೂರಿನ ಪ್ರಕಾರ, ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಅಥವಾ ಎಸ್‌ಐಐನ ನಿರ್ದೇಶಕರಲ್ಲಿ ಒಬ್ಬರಾದ ಸತೀಶ್ ದೇಶಪಾಂಡೆ ಅವರು ಎಸ್‌ಐಐ ಸಿಇಒ ಆದರ್ ಪೂನಾವಾಲ್ಲಾ ಎಂದು ಬಿಂಬಿಸಿಕೊಂಡ ವ್ಯಕ್ತಿಯಿಂದ ವಾಟ್ಸ್ ಆ್ಯಪ್‌ನಲ್ಲಿ ಸಂದೇಶವನ್ನು ಸ್ವೀಕರಿಸಿದ್ದಾರೆ. ಸೆಪ್ಟೆಂಬರ್ 2022 ರಲ್ಲಿ ಏಳು ವಿಭಿನ್ನ ಖಾತೆಗಳಿಗೆ ಹಣವನ್ನು ಕಳುಹಿಸುವಂತೆ ವಿನಂತಿಸಲಾಗಿತ್ತು.

ಅದಾರ್ ಪೂನಾವಾಲಾ ಅವರಿಂದಲೇ ಸಂದೇಶ ಬಂದಿದೆ ಎಂದು  ನಂಬಿದ ಸತೀಶ್ ದೇಶಪಾಂಡೆ ಅವರು ಆ ಖಾತೆಗಳಿಗೆ  1.01 ಕೋಟಿ ರೂ. ವರ್ಗಾಯಿಸಿದರು, ಕಂಪನಿಗೆ ವಂಚನೆಯಾಗಿದೆ ಎಂದು ಬಳಿಕ ತಿಳಿದುಬಂದಿದೆ.

ಈ ಸಂಬಂಧ ದೂರು ದಾಖಲಾಗಿದ್ದು, ತನಿಖೆ ವೇಳೆ ಪೊಲೀಸರು ಹಣ ವರ್ಗಾವಣೆ ಮಾಡಿರುವ ಎಂಟು ಖಾತೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

Similar News