ಎಲ್ಗರ್ ಪರಿಷತ್ ಪ್ರಕರಣ: ಸಾಮಾಜಿಕ ಹೋರಾಟಗಾರ ಆನಂದ್ ತೇಲ್ತುಂಬ್ಡೆ ಜಾಮೀನಿನ ಮೇಲೆ ಬಿಡುಗಡೆ

Update: 2022-11-26 09:42 GMT

ಮುಂಬೈ: ಜಾಮೀನು ಪ್ರಶ್ನಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ ((NIA) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ ಒಂದು ದಿನದ ನಂತರ  ಎಲ್ಗರ್ ಪರಿಷತ್-ಮಾವೋವಾದಿ ಸಂಪರ್ಕ ಪ್ರಕರಣದ ಆರೋಪಿ, ವಿದ್ವಾಂಸ ಹಾಗೂ ಸಾಮಾಜಿಕ ಹೋರಾಟಗಾರ  ಆನಂದ್ ತೇಲ್ತುಂಬ್ಡೆ scholar-activist Anand Teltumbde ಅವರು ನವಿ ಮುಂಬೈನ ತಲೋಜಾ ಕೇಂದ್ರ ಕಾರಾಗೃಹದಿಂದ ಶನಿವಾರ ಬಿಡುಗಡೆಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಕರಣದಲ್ಲಿ ಎರಡೂವರೆ ವರ್ಷಗಳ ಕಾಲ ಜೈಲಿನಲ್ಲಿದ್ದ 73 ವರ್ಷದ ತೇಲ್ತುಂಬ್ಡೆ ಅವರು ಮಧ್ಯಾಹ್ನ 1.15 ರ ಸುಮಾರಿಗೆ ಜೈಲಿನಿಂದ ಹೊರನಡೆದರು ಎಂದು ಅಧಿಕಾರಿ  ಹೇಳಿದರು.

"ತೇಲ್ತುಂಬ್ಡೆಗೆ ಜಾಮೀನು ನೀಡುವ ಬಾಂಬೆ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಎನ್‌ಐಎ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಅದರಂತೆ, ಜಾಮೀನು ಔಪಚಾರಿಕತೆ ಪೂರ್ಣಗೊಂಡ ನಂತರ ಅವರನ್ನು ಬಿಡುಗಡೆ ಮಾಡಲಾಯಿತು" ಎಂದು ಅಧಿಕಾರಿ  ಹೇಳಿದರು.

ಎನ್ಐಎ ಮುಂದೆ ಶರಣಾದ ನಂತರ ಎಪ್ರಿಲ್ 14, 2020 ರಂದು ಕೇಂದ್ರೀಯ ಸಂಸ್ಥೆಯಿಂದ ಬಂಧಿಸಲ್ಪಟ್ಟ ತೇಲ್ತುಂಬ್ಡೆಗೆ ನವೆಂಬರ್ 18 ರಂದು  ಹೈಕೋರ್ಟ್ ಜಾಮೀನು ನೀಡಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

Similar News