ಫಿಫಾ ವಿಶ್ವಕಪ್: ಸೌದಿ ಅರೇಬಿಯ ವಿರುದ್ಧ ಪೋಲ್ಯಾಂಡ್‌ಗೆ ಜಯ

Update: 2022-11-26 15:06 GMT

 ದೋಹಾ, ನ.26: ಫಿಫಾ ವಿಶ್ವಕಪ್‌ನ ಗ್ರೂಪ್ 'ಸಿ' ಪಂದ್ಯದಲ್ಲಿ ಪೋಲ್ಯಾಂಡ್ ತಂಡ ಸೌದಿ ಅರೇಬಿಯ ತಂಡವನ್ನು 2-0 ಗೋಲುಗಳ ಅಂತರದಿಂದ ಮಣಿಸಿದೆ.

  ಎಜುಕೇಶನ್ ಸಿಟಿ ಸ್ಟೇಡಿಯಮ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಪಿಯೊತ್ರೆ ಶೆಲಿನ್‌ಸ್ಕಿ 39ನೇ ನಿಮಿಷದಲ್ಲಿ ಗೋಲು ಗಳಿಸಿ 1-0 ಮುನ್ನಡೆ ಒದಗಿಸಿಕೊಟ್ಟರು. 82ನೇ ನಿಮಿಷದಲ್ಲಿ ಗೋಲು ಗಳಿಸಿದ ರಾಬರ್ಟ್ ಲೆವಾಂಡೋಸ್ಕಿ ಪೋಲ್ಯಾಂಡ್ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು.
 

Similar News