ಮೂಲಭೂತ ಕರ್ತವ್ಯಗಳ ಪಾಲನೆ ಪ್ರಜೆಗಳ ಪ್ರಥಮ ಆದ್ಯತೆಯಾಗಬೇಕು: ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ

Update: 2022-11-26 16:47 GMT

ಹೊಸದಿಲ್ಲಿ,ನ.27: ಮೂಲಭೂತ ಕರ್ತವ್ಯಗಳನ್ನು ಈಡೇರಿಸಲು ಆದ್ಯತೆಯನ್ನು ನೀಡುವ ಮೂಲಕ ಪ್ರಜೆಗಳು, ಸ್ವಾತಂತ್ರದ ಶತಮಾನೋತ್ಸವದೆಡೆಗೆ ಮುನ್ನಡೆಯುತ್ತಿರುವ ದೇಶವನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಕೊಂಡೊಯ್ಯಬೇಕೆಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಕರೆ ನೀಡಿದ್ದಾರೆ.

ಸುಪ್ರೀಂಕೋರ್ಟ್ (Supreme Court)ನಲ್ಲಿ ಶನಿವಾರ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಕ್ಷಿಪ್ರವಾದ ಪ್ರಗತಿ ಹಾಗೂ ಆರ್ಥಿಕ ಬೆಳವಣಿಗೆಯನ್ನು ಕಾಣುತ್ತಿರುವ ಭಾರತದೆಡೆಗೆ ಇಡೀ ಜಗತ್ತು ನೋಡುತ್ತಿದೆ ಎಂದು ಅವರು ಹೇಳಿದರು.

 ಮುಂದಿನ ವಾರ ಭಾರತವು ಜಿ-20 ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದು, ಜಗತ್ತಿಗೆ ತನ್ನ ಕೊಡುಗೆಯನ್ನು ಪ್ರಸ್ತುತ ಪಡಿಸಲು ದೇಶಕ್ಕೆ ಇದೊಂದು ಸದವಕಾಶವಾಗಿದೆ ಎಂದರು.

‘‘ನಾವು ‘ಟೀಮ್ ಇಂಡಿಯಾ’ (We are Team India.)ವಾಗಿ, ಜಾಗತಿಕರಂಗದಲ್ಲಿ ನಮ್ಮ ಪ್ರತಿಷ್ಠೆಯನ್ನು ವೃದ್ಧಿಸಲು ಶ್ರಮಿಸಬೇಕು ಹಾಗೂ ಜಗತ್ತಿಗೆ ನಮ್ಮ ಕೊಡುಗೆಯ ಬಗ್ಗೆ ಬೆಳಕು ಚೆಲ್ಲಬೇಕು. ಇದು ನಮ್ಮ ಸಾಮೂಹಿಕ ಹೊಣೆಗಾರಿಕೆಯಾಗಿದೆ’’ ಎಂದು ಮೋದಿ ತಿಳಿಸಿದರು. ‘ಪ್ರಜಾಪ್ರಭುತ್ವದ ತಾಯಿ’('Mother of Democracy') ಎಂಬ ಭಾರತದ ಗುರುತನ್ನು ನಾವು ಬಲಪಡಿಸಬೇಕಾಗಿದೆ ಎಂದವರು ಹೇಳಿದರು.

ಪ್ರಜಾಪ್ರಭುತ್ವದದ ತಾಯಿಯ ರೂಪದಲ್ಲಿ ಭಾರತವು, ತನ್ನ ಪುರಾತನ ಆದರ್ಶಗಳು ಹಾಗೂ ಸಂವಿಧಾನದ ಆಶಯವನ್ನು ಗಟ್ಟಿಗೊಳಿಸುತ್ತಿದೆ ಎಂದು ಹೇಳಲು ತಾನು ಸಂತಸಪಞುತ್ತೇನೆ ಎಂದ ಅವರು, ಸರಕಾರದ ಜನಪರ ನೀತಿಗಳು ದೇಶದ ಬಡವರು ಹಾಗೂ ಮಹಿಳೆಯರನ್ನು ಸಬಲೀಕರಣಗೊಳಿಸುತ್ತಿದೆ ಎಂದುರ.

   ಸಂವಿಧಾನದ ಪೀಠಿಕೆಯಲ್ಲಿರುವ ಮೊದಲು ಮೂರು ಪದಗಳಾದ ವಿ ದಿ ಪೀಪಲ್ (ನಾವು ಜನತೆ) ಎಂಬುದು ಕರೆ, ನಂಬಿಕೆ ಹಾಗೂ ಪ್ರತಿಜ್ಞೆಯಾಗಿದೆ. ಸಂವಿಧಾನದ ಈ ಆಶಯವು ಜಗತ್ತಿಗೆ ಪ್ರಜಾಪ್ರಭುತ್ವದ ತಾಯಿಯಾಗಿರುವ ಭಾರತದ ಆಶಯ ಕೂಡಾ ಆಗಿದೆ. ಆಧುನಿಕ ಯುಗದಲ್ಲಿ ಸಂವಿಧಾನವು ಜೇಶದ ಎಲ್ಲಾ ಸಾಂಸ್ಕೃತಿಕ ಹಾಗೂ ನೈತಿಕ ಭಾವುಕತೆಗಳನ್ನು ಆಲಂಗಿಸಿಕೊಂಡಿದೆ’’ ಎಂದು ಮೋದಿ ಹೇಳಿದರು. 

ಸ್ವಾತಂತ್ರದ ಆರಂಭದಲ್ಲಿ ತನ್ನ ಸ್ಥಿರತೆಯ ಬಗ್ಗೆ ಇದ್ದ ಎಲ್ಲಾ ಆತಂಕಗಳನ್ನು ನಿವಾರಿಇರುವ ಭಾರತವು ತನ್ನ ವೈವಿಧ್ಯತೆಯ ಬಗ್ಗೆ ಹೆಮ್ಮೆಪಡುತ್ತಲೇ ಸಂಪೂರ್ಣ ಶಕ್ತಿಯೊಂದಿಗೆ ಮುನ್ನಡೆಯುತ್ತಿದೆ ಎಂದುರ.

 ಮಹಾತ್ಮಾಗಾಂಧೀಜಿಯವರ ಮಾತೊಂದನ್ನು ಉಲ್ಲೇಖಿಸಿದ ಅವರು, ದೇಶದ ಜನತೆ ತಮ್ಮ ಹೊಣೆಗಾರಿಕೆಗಳನ್ನು ಅತ್ಯಂತ ಸಮರ್ಪಣಾ ಮನೋಭಾವ ಹಾಗೂ ನೈಜ ಪ್ರಾಮಾಣಿಕತೆಯೊಂದಿಗೆ ನಿರ್ವಹಿಸುವುದೇ ಜನತೆಯ ಮೂಭೂತ ಹಕ್ಕುಗಳಾಗಿವೆ ಎಂದವರು ಹೇಳಿದ್ದಾರೆ.

ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮಲು ಭಾರತದ ಮುಂದಿನ 25 ವರ್ಷಗಳ ಪಯಣವು ಅಮೃತ ಕಾಲವಾಗಿದೆ. ಇದು ಜನತೆ ತಮ್ಮ ಮೂಭೂತ ಕರ್ತವ್ಯಗಳನ್ನು ನಿರ್ವಹಿಸಬೇಕಾದ ಕರ್ತವ್ಯ ಕಾಲ ಕೂಡಾ ಆಗಿದೆ ಎಂದು ಪ್ರಧಾನಿ ತಿಳಿಸಿದು.

 2008ರ ನವೆಂಬರ್ 26ರಂದು ಮುಂಬೈಯಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟವರನ್ನು ಪ್ರಧಾನಿ ಈ ಸಂದರ್ಭದಲ್ಲಿ ಸ್ಮರಿಸಿದರು. ಇದೇ ಸಂದರ್ಭದಲ್ಲಿ ಅವರು ಇ-ಕೋರ್ಟ್ ಪ್ರಾಜೆಕ್ಟ್ ಎಂಬ ವಿನೂತನ ಉಪಕ್ರಮಕ್ಕೆ ಅವರು ಚಾಲನೆ ನೀಡಿದರು.

 ಇದೇ ವೇಳೆ ಜನಸಾಮಾನ್ಯರಿಗೆ ಸುಲಭ ಕಾನೂನು ಸೇವೆಗಳನ್ನು ಒದಗಿಸುವ ಉದ್ದೇಶ ಹೊಂದಿರುವ ಜಸ್ಟ್ಐಎಸ್ ಮೊಬೈಲ್ ಆ್ಯಪ್ 2.0, ಡಿಜಿಟಲ್ ಕೋರ್ಟ್ ಹಾಗೂ ‘ ಎಸ್3ಡ್ಲ್ಲಬ್ಲು ಎಎಎಸ್’ ಎಂಬ ವೆಬ್ಸೈಟ್  ಅವರು ಚಾಲನೆ ನೀಡಿದರು.

ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ(DY Chandrachud), ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿಗಳು, ಅಟಾರ್ನಿ ಜನರಲ್ ಆರ್.ವೆಂಕಟರಮಣಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ಸುಪ್ರೀಂಕೋರ್ಟ್ ವಕೀಲರ ಸಂಘದ ಅಧ್ಯಕ್ಷ ವಿಕಾಸ್ ಸಿಂಗ್(Vikas Singh) ಉಪಸ್ಥಿತರಿದ್ದರು.

Similar News