ಗುಜರಾತ್: ಚುನಾವಣಾ ಕರ್ತವ್ಯದಲ್ಲಿದ್ದ ಸೈನಿಕನಿಂದ ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ; ಇಬ್ಬರು ಮೃತ್ಯು

Update: 2022-11-26 16:55 GMT

ಅಹಮದಾಬಾದ್: ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಗುಜರಾತ್‌ನ ಪೋರಬಂದರ್ ಬಳಿ ಚುನಾವಣಾ ಕರ್ತವ್ಯ ಮಾಡುತ್ತಿದ್ದ ಅರೆಸೇನಾ ಪಡೆಯ ಸೈನಿಕನೋರ್ವ ತನ್ನ ಇಬ್ಬರು ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಗಾಯಗೊಂಡಿರುವ ಇನ್ನಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂಜೆ ಜಗಳ ನಡೆದ ವೇಳೆ ಅವರು ಸಕ್ರಿಯ ಕರ್ತವ್ಯದಲ್ಲಿ ಇರಲಿಲ್ಲ, ಜಗಳ ಉಲ್ಬಣಗೊಂಡು ಎಕೆ -56 ರೈಫಲ್‌ನಿಂದ ಗುಂಡು ಹಾರಿಸಿದ್ದಾನೆ ಎಂದು ತಿಳಿದುಬಂದಿದೆ. ಅವರು ಮಣಿಪುರದ ಇಂಡಿಯಾ ರಿಸರ್ವ್ ಬೆಟಾಲಿಯನ್ (IRB) ನ ಭಾಗವಾಗಿದ್ದರು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (CAPF) ಜೊತೆಗೆ ಗುಜರಾತ್‌ನಲ್ಲಿ ನಿಯೋಜಿಸಲ್ಪಟ್ಟಿದ್ದಾರೆ ಎಂದು ಪೋರಬಂದರ್ ಕಲೆಕ್ಟರ್ ಮತ್ತು ಜಿಲ್ಲಾ ಚುನಾವಣಾ ಅಧಿಕಾರಿ ಎಎಮ್ ಶರ್ಮಾ ಹೇಳಿದ್ದಾರೆ.

ಘರ್ಷಣೆಗೆ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ.

ಗಾಯಗೊಂಡ ಇಬ್ಬರು ಜವಾನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸುಮಾರು 150 ಕಿಮೀ ದೂರದಲ್ಲಿರುವ ಜಾಮ್‌ನಗರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

Similar News