ಇಸ್ರೋದ ಓಸಿಯಾನ್ಸ್ಯಾಟ್ ಉಪಗ್ರಹ ಯಶಸ್ವಿ ಉಡಾವಣೆ

Update: 2022-11-26 17:05 GMT

ಶ್ರೀಹರಿಕೋಟಾ,ನ.26: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ(ISRO), ಭೂ ವೀಕ್ಷಣಾ ಉಪಗ್ರಹವಾದ ಒಸಿಯಾನ್ ಸ್ಯಾಟ್ (Ocean Sat)ಅನ್ನು ಪಿಎಸ್ಎಲ್ವಿ-ಸಿ54 ರಾಕೆಟ್(PSLV-C54 rocket) ಮೂಲಕ ಶನಿವಾರ ಯಶಸ್ವಿಯಾಗಿ ಉಡಾವಣೆಗೊಳಿಸಿದೆ. ಇದರೊಂದಿಗೆ ಇಸ್ರೋದ ಸಾಧನೆಯ ಕಿರೀಟಕ್ಕೆ ಶನಿವಾರ ಇನ್ನೊಂದು ತುರಾಯಿ ಸೇರ್ಪಡೆಗೊಂಡಿದೆ.

 ಒಸಿಯಾನ್ ಸ್ಯಾಟ್ ಹಾಗೂ ಎಂಟು ನ್ಯಾನೊ ಉಪಗ್ರಹಗಳನ್ನು ಹೊತ್ತ ಪಿಎಸ್ಎಲ್ವಿ-ಸಿ54 ರಾಕೆಟ್ ಶನಿವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ಧವನ್ (Satishdhavan of Sriharikota)ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 11:56ರ ವೇಳೆಗೆ ಉಡಾವಣೆಗೊಂಡಿತು.

 ಇಸ್ರೋದ ಈ ವರ್ಷದ ಕೊನೆಯ ಬಾಹ್ಯಾಕಾಶ ಉಡಾವಣಾ ಯೋಜನೆ ಇದಾಗಿದೆ. ಉಡಾವಣೆಗೊಂಡ 17 ನಿಮಿಷಗಳಲ್ಲಿ ಒಸಿಯಾನ್ಸ್ಯಾಟ್ ಉಪಗ್ರಹವನ್ನು ಸೂರ್ಯನ ಸಿಂಕ್ರೊನೈಸ್ಡ್ ಕಕ್ಷೆಯಲ್ಲಿ ಯಶಸ್ವಿಯಾಗಿ ಸ್ಥಾಪಿಸಲಾಯಿತು ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮವಾಥ್ (S. Somwath)ತಿಳಿಸಿದ್ದಾರೆ.

 ಆನಂತರ ಎರಡು ತಾಸುಗಳ ಕಾರ್ಯಾಚರಣೆಯಲ್ಲಿ ರಾಕೆಟನ್ನು ಕೆಳಗಿನ ಮಟ್ಟಕ್ಕೆ ಇಳಿಸಿದ ವಿಜ್ಞಾನಿಗಳು ಇತರ ಎಂಟು ನ್ಯಾನೊ ಉಪಗ್ರಹಗಳನ್ನು ವಿಭಿನ್ನ ಕಕ್ಷೆಯಲ್ಲಿ ಸ್ಥಾಪಿಸುವಲ್ಲಿ ಯಶಸ್ವಿಯಾದರು.

  ಈ ಬಾರಿ ಉಡಾವಣೆಗೊಂಡ ಭೂ ವೀಕ್ಷಣಾ ಉಪಗ್ರಹ-6, ಓಸಿಯಾನ್ ಸರಣಿಯ ಮೂರನೆ ತಲೆಮಾರಿನ ಉಪಗ್ರಹವಾಗಿದೆ.

Similar News