×
Ad

ನಿಮಗೆ ಕೊಳಕು ರಾಜಕಾರಣ ಬೇಕಿದ್ದರೆ ಬಿಜೆಪಿಯನ್ನು ಆಯ್ಕೆ ಮಾಡಿ: ಅರವಿಂದ ಕೇಜ್ರಿವಾಲ್

Update: 2022-11-26 23:08 IST

ಹೊಸದಿಲ್ಲಿ, ನ. 26:  ಗುಜರಾತ್‌ನ ಚುನಾವಣಾ ರ್ಯಾಲಿಯ ಸಂದರ್ಭ ಬಿಜೆಪಿಯ ಸ್ಟಾರ್ ಪ್ರಚಾರಕ ಆದಿತ್ಯನಾಥ್ ತನ್ನನ್ನು ‘‘ಭಯೋತ್ಪಾದನೆ ಸಹಾನುಭೂತಿ ಉಳ್ಳವರು’’ ಎಂದು ಕರೆದಿರುವ ವೀಡಿಯೊವೊಂದನ್ನು ಶನಿವಾರ ಹಂಚಿಕೊಂಡಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್, ಬಿಜೆಪಿಯ ನಿಂದನೆಯ ರಾಜಕಾರಣ ಹಾಗೂ ಗೂಂಡಾಗಿರಿಯ ವಿರುದ್ಧ ಅಭಿವೃದ್ಧಿಯ ಪರ ನಿಲ್ಲುವ ವ್ಯಕ್ತಿ ತಾನೆಂದು ಹೇಳಿದ್ದಾರೆ.

‘ನೀವು ಕೊಳಕು ನಿಂದನೆ, ಗೂಂಡಾಗಿರಿ, ಭ್ರಷ್ಟಾಚಾರ ಅಥವಾ ಕೊಳಕು  ರಾಜಕಾರಣವನ್ನು ಬಯಸುವಿರಾದರೆ, ಅವರಿಗೆ ಮತ ಚಲಾಯಿಸಿ. ನೀವು ಶಾಲೆ, ಆಸ್ಪತ್ರೆ, ವಿದ್ಯುತ್, ನೀರು, ರಸ್ತೆ ಬಯಸುವಿರಾದರೆ ನನಗೆ ಮತ ಚಲಾಯಿಸಿ’’ ಎಂದು ಕೇಜ್ರಿವಾಲ್ ಅವರು ಹೇಳಿದ್ದಾರೆ. 

ಅಲ್ಲದೆ ‘‘ದಿಲ್ಲಿಯಿಂದ ಬಂದಂತಹ ಆಮ್ ಆದ್ಮಿ ಪಕ್ಷದ ಈ ಮಾದರಿ ನಿಜವಾಗಿ ಭಯೋತ್ಪಾದನೆಯ ಸಹಾನುಭೂತಿ ಉಳ್ಳವರು’’ ಎಂಬ ಅಡಿ ಬರಹದೊಂದಿಗೆ ಆದಿತ್ಯನಾಥ್ ಮಾಡಿದ ಟ್ವೀಟ್ ಅನ್ನು ಕೇಜ್ರಿವಾಲ್ ಮರು ಟ್ವೀಟ್ ಮಾಡಿದ್ದಾರೆ.

ಕೇಜ್ರಿವಾಲ್ ಹಂಚಿಕೊಂಡ ವೀಡಿಯೊದಲ್ಲಿ ಯೋಗಿ ಆದಿತ್ಯನಾಥ್, ‘‘ಆಪ್ ನಾಯಕ ರಾಮ ಮಂದಿರ ನಿರ್ಮಾಣವನ್ನು ವಿರೋಧಿಸುತ್ತಾರೆ. ಅಲ್ಲದೆ, ಪಾಕಿಸ್ತಾನದಲ್ಲಿ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್‌ಗೆ ಕೂಡ ಪುರಾವೆ ಕೇಳುತ್ತಿದ್ದಾರೆ’’ ಎಂದು ಹೇಳುತ್ತಿರುವುದು ಕೂಡ ಕಂಡು ಬಂದಿದೆ.

Similar News