ದತ್ತಾಶ ಸಂರಕ್ಷಣೆ ಮಸೂದೆಯಡಿ ನಾಗರಿಕರ ಗೋಪ್ಯತೆಯನ್ನು ಉಲ್ಲಂಘಿಸಲು ಸರಕಾರಕ್ಕೆ ಸಾಧ್ಯವಿಲ್ಲ: ರಾಜೀವ್ ಚಂದ್ರಶೇಖರ

Update: 2022-11-27 18:25 GMT

ಹೊಸದಿಲ್ಲಿ: ಪ್ರಸ್ತಾವಿತ ದತ್ತಾಂಶ ಸಂರಕ್ಷಣೆ ಕಾನೂನಿನಡಿ ನಾಗರಿಕರ ಗೋಪ್ಯತೆಯನ್ನು ಉಲ್ಲಂಘಿಸಲು ಸರಕಾರಕ್ಕೆ ಸಾಧ್ಯವಿಲ್ಲ. ರಾಷ್ಟ್ರೀಯ ಭದ್ರತೆ,ಸಾಂಕ್ರಾಮಿಕ ಮತ್ತು ನೈಸರ್ಗಿಕ ವಿಪತ್ತುಗಳಿಗೆ ಸಂಬಂಧಿಸಿದ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಪ್ರಜೆಗಳ ವೈಯಕ್ತಿಕ ದತ್ತಾಂಶಗಳನ್ನು ಪ್ರವೇಶಿಸಲು ಸರಕಾರಕ್ಕೆ ಸಾಧ್ಯವಾಗಲಿದೆ ಎಂದು ಕೇಂದ್ರ ಸಹಾಯಕ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ ಹೇಳಿದ್ದಾರೆ.

ಸರಕಾರವು ನ.18ರಂದು ಪ್ರಸ್ತಾವಿತ ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣೆ ಮಸೂದೆ,2022ರ ಕರಡನ್ನು ತನ್ನ ವೆಬ್ಸೈಟ್ನಲ್ಲಿ ಬಿಡುಗಡೆಗೊಳಿಸಿದ್ದು,ಡಿ.17ರವರೆಗೆ ಸಾರ್ವಜನಿಕರಿಂದ ಮರುಮಾಹಿತಿಯನ್ನು ಆಹ್ವಾನಿಸಿದೆ.

ಶನಿವಾರ ಇಲ್ಲಿ ಕರಡು ಮಸೂದೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಶೇಖರ,ದತ್ತಾಂಶ ಸಂರಕ್ಷಣೆ ಹಕ್ಕು ವಾಕ್ಸ್ವಾತಂತ್ರದಂತೆ ಸಮಂಜಸ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಎಂದು ತಿಳಿಸಿದರು.

ಈ ಕಾನೂನಿನೊಂದಿಗೆ ನಾಗರಿಕರ ಗೋಪ್ಯತೆಯನ್ನು ಉಲ್ಲಂಘಿಸಲು ಸರಕಾರವು ಬಯಸುತ್ತಿದೆ ಎನ್ನೋಣ. ಅದು ಸಾಧ್ಯವೇ? ಇದು ಪ್ರಶ್ನೆಯಾಗಿದೆ ಮತ್ತು ಇಲ್ಲ ಎನ್ನುವುದು ಉತ್ತರವಾಗಿದೆ. ಸರಕಾರವು ನಾಗರಿಕರ ವೈಯಕ್ತಿಕ ದತ್ತಾಂಶಗಳನ್ನು ಪ್ರವೇಶಿಸಬಹುದಾದ ಅಸಾಧಾರಣ ಸಂದರ್ಭಗಳನ್ನು ಮಸೂದೆ ಮತ್ತು ಕಾನೂನುಗಳು ಅತ್ಯಂತ ಸ್ಪಷ್ಟ ಶಬ್ದಗಳಲ್ಲಿ ಹೇಳಿವೆ ಎಂದ ಸಚಿವರು,ಪ್ರಸ್ತಾವಿತ ದತ್ತಾಂಶ ಸಂರಕ್ಷಣೆ ಮಂಡಳಿ (ಡಿಪಿಬಿ)ಯು ಸ್ವತಂತ್ರವಾಗಿರಲಿದೆ ಮತ್ತು ಯಾವುದೇ ಸರಕಾರಿ ಅಧಿಕಾರಿಯನ್ನು ಹೊಂದಿರುವುದಿಲ್ಲ. ಡಿಪಿಬಿ ನಿಯಂತ್ರಕವಲ್ಲ ಎಂದು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಡಿಪಿಬಿಯು ಸಂಭವಿಸಿರುವ ಉಲ್ಲಂಘನೆಯನ್ನು ನಿರ್ಣಯಿಸಲು ಒಂದು ನಿರ್ಧಾರ ಕಾರ್ಯವಿಧಾನವಾಗಿದೆ ಎಂದರು.

Similar News