ಹರ್ಯಾಣ ಪಂಚಾಯತ್ ಚುನಾವಣೆ: ಬಿಜೆಪಿಗೆ 22 ಸ್ಥಾನ, 15 ಸ್ಥಾನದೊಂದಿಗೆ ಆಪ್ ಗೆ ಎರಡನೇ ಸ್ಥಾನ

Update: 2022-11-28 06:29 GMT

ಚಂಡೀಗಢ: ಹರ್ಯಾಣ ಪಂಚಾಯತ್ ಚುನಾವಣೆಯ Haryana Panchayat Polls ಫಲಿತಾಂಶ ರವಿವಾರ ಪ್ರಕಟವಾಗಿದ್ದು, ಬಿಜೆಪಿ, ಎಎಪಿ  ಹಾಗೂ  ಐಎನ್‌ಎಲ್‌ಡಿ ಅಭ್ಯರ್ಥಿಗಳು ರಾಜ್ಯದ ಜಿಲ್ಲಾ ಪರಿಷತ್ತಿನ ಹಲವು ಸ್ಥಾನಗಳಲ್ಲಿ ಜಯ ದಾಖಲಿಸಿದ್ದಾರೆ.

ಎಲ್ಲಾ ಚುನಾಯಿತ ಅಭ್ಯರ್ಥಿಗಳ ಹೆಸರುಗಳ ಅಧಿಸೂಚನೆಯನ್ನು ನವೆಂಬರ್ 30 ರ ಮೊದಲು ಹರ್ಯಾಣ ರಾಜ್ಯ ಸರಕಾರದ ಗೆಝೆಟ್‌ನಲ್ಲಿ ಹೊರಡಿಸಲಾಗುವುದು ಎಂದು ಹಿರಿಯ ಚುನಾವಣಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಂಬಾಲಾ, ಯಮುನಾನಗರ ಹಾಗೂ  ಗುರುಗ್ರಾಮ್ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಸ್ಪರ್ಧಿಸಿದ್ದ ಜಿಲ್ಲಾ ಪರಿಷತ್ತಿನ 102 ಸ್ಥಾನಗಳಲ್ಲಿ ಆಡಳಿತಾರೂಢ ಬಿಜೆಪಿ 22 ಸ್ಥಾನಗಳನ್ನು ಗೆದ್ದಿದೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

ಆದಾಗ್ಯೂ, ಪಂಚಕುಲದಲ್ಲಿ ಪಕ್ಷವು ಆಘಾತವನ್ನು ಎದುರಿಸಿತು, ಅಲ್ಲಿ ಅದು ಜಿಲ್ಲಾ ಪರಿಷತ್ತಿನ 10 ಸ್ಥಾನಗಳನ್ನು ಕಳೆದುಕೊಂಡಿತು.

ಸಿರ್ಸಾ, ಅಂಬಾಲಾ, ಯಮುನಾನಗರ ಹಾಗೂ  ಜಿಂದ್ ಜಿಲ್ಲೆಗಳಲ್ಲಿ ಜಿಲ್ಲಾ ಪರಿಷತ್ತಿನ 15 ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಆಮ್ ಆದ್ಮಿ ಪಕ್ಷವು ಪಂಚಾಯತ್ ಚುನಾವಣೆಯಲ್ಲಿ ತನ್ನ ಅಸ್ತಿತ್ವವನ್ನು ತೋರಿಸುವಲ್ಲಿ ಯಶಸ್ವಿಯಾಗಿದೆ. ಎಎಪಿ ಜಿಲ್ಲಾ ಪರಿಷತ್‌ನ ಸುಮಾರು 100 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು.

ಜಿಲ್ಲಾ ಪರಿಷತ್ತಿನ 72 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಭಾರತೀಯ ರಾಷ್ಟ್ರೀಯ ಲೋಕದಳವು ಚುನಾವಣೆಯಲ್ಲಿ 14 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ.

ಕಾಂಗ್ರೆಸ್ ತನ್ನ ಪಕ್ಷದ ಚಿಹ್ನೆಯ ಮೇಲೆ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ.

Similar News