ಮಾಧ್ಯಮಗಳು ಸಾರ್ವಜನಿಕರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿವೆ : ರಾಹುಲ್ ಗಾಂಧಿ

Update: 2022-11-28 07:30 GMT

ಇಂದೋರ್: ಮಾಧ್ಯಮಗಳು ಸಾರ್ವಜನಿಕರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿವೆ ಹಾಗೂ  ಸೆಲೆಬ್ರಿಟಿಗಳ ಬಗ್ಗೆ ವರದಿ ಮಾಡುತ್ತಿವೆ. ಪತ್ರಕರ್ತರು ಒತ್ತಡದಲ್ಲಿ ಇದನ್ನು ಮಾಡುತ್ತಿದ್ದಾರೆ. ನನಗೆ ಅವರ ಮೇಲೆ ಯಾವುದೇ ದ್ವೇಷವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

"ನಿರುದ್ಯೋಗ ಹಾಗೂ  ರೈತರ ಸಂಕಷ್ಟ ಅಥವಾ ಭಾರತ್ ಜೋಡೋ ಯಾತ್ರೆಯ ಯಶಸ್ಸಿನಂತಹ ಸಾರ್ವಜನಿಕ ವಿಚಾರಗಳ ಬಗ್ಗೆ ವರದಿ ಮಾಡುವ ಬದಲು, ಮಾಧ್ಯಮ ಸಿಬ್ಬಂದಿ ಐಶ್ವರ್ಯಾ ರೈ ಯಾವ ಉಡುಗೆ ತೊಟ್ಟಿದ್ದಾರೆ, ಶಾರುಖ್ ಖಾನ್ ಏನು ಹೇಳುತ್ತಾರೆ ಹಾಗೂ  ವಿರಾಟ್ ಕೊಹ್ಲಿ ಎಷ್ಟು ಬೌಂಡರಿ ಹೊಡೆದರು ಎಂಬ ಬಗ್ಗೆ ಬಲವಂತವಾಗಿ  ವರದಿ ಮಾಡುತ್ತಿದ್ದಾರೆ. ಪತ್ರಿಕಾ ಮಾಧ್ಯಮದವರ ವಿರುದ್ಧ ನಾನು ಯಾವುದೇ ದ್ವೇಷವನ್ನು ಹೊಂದಿಲ್ಲ ಅವರು ಯಾರದೋ  ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ., ಟಿವಿ ರಿಮೋಟ್ ತೆಗೆದುಕೊಂಡು ಚಾನೆಲ್‌ ಬದಲಾಯಿಸಲು ಆರಂಭಿಸಿದರೆ ನೀವು ನೋಡುವುದು ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್, ಶಿವರಾಜ್ ಸಿಂಗ್ ಚೌಹಾಣ್, ಐಶ್ವರ್ಯ ರೈ, ಹಾಗೂ  ಅಜಯ್ ದೇವಗನ್ ಮಾತ್ರ.  ನಮ್ಮ ರೈತರ ಚಿಂತಾಕ್ರಾಂತ ಮುಖ ಹಾಗೂ   ಕೈಗಳನ್ನು ನೀವು ಎಂದಿಗೂ ನೋಡುವುದಿಲ್ಲ" ಎಂದು ಅವರು ಹೇಳಿದರು.

ಪ್ರಸಿದ್ಧ ಉರ್ದು ಕವಿ ರಾಹತ್ ಇಂದೋರಿ ಅವರ ಮಗ ಸತ್ಲಾಜ್ ಇಂದೋರಿ ಕೂಡ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡರು. ರಾಹುಲ್ ಗಾಂಧಿಯವರಿಗೆ ಆತ್ಮಚರಿತ್ರೆ ಸೇರಿದಂತೆ ತನ್ನ ದಿವಂಗತ ತಂದೆಗೆ ಸಮರ್ಪಿಸಲಾದ ಎರಡು ಪುಸ್ತಕಗಳನ್ನು ಅವರಿಗೆ ನೀಡಿದ್ದೇನೆ ಎಂದು ಹೇಳಿದರು.

ಇಂದೋರ್ ನಲ್ಲಿ ಯಾತ್ರೆ ಕೈಗೊಂಡಿರುವ ರಾಹುಲ್ ಗಾಂಧಿ ಅವರು  ಕೇಂದ್ರ ಸರಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದರು, "ಚೀನಾ ಸೇನೆಯು ಭಾರತಕ್ಕೆ ಏನು ಮಾಡಲು ಸಾಧ್ಯವಾಗಲಿಲ್ಲವೋ ಅದನ್ನು ನೋಟು ಅಮಾನ್ಯೀಕರಣ ಹಾಗೂ  ದೋಷಪೂರಿತ ಜಿಎಸ್‌ಟಿ ಮಾಡಿದೆ" ಎಂದು ಹೇಳಿದರು

Similar News