ಫಿಫಾ ವಿಶ್ವಕಪ್: ದಕ್ಷಿಣ ಕೊರಿಯಾವನ್ನು ರೋಚಕವಾಗಿ ಮಣಿಸಿದ ಘಾನಾ

Update: 2022-11-28 15:29 GMT

ದೋಹಾ, ನ.28: ಫಿಫಾ ವಿಶ್ವಕಪ್ ಟೂರ್ನಿಯ ‘ಎಚ್’ ಗುಂಪಿನ ಪಂದ್ಯದಲ್ಲಿ ಘಾನಾ ತಂಡವು ದಕ್ಷಿಣ ಕೊರಿಯಾ ತಂಡವನ್ನು 3-2 ಗೋಲುಗಳ ಅಂತರದಿಂದ ರೋಚಕವಾಗಿ ಮಣಿಸಿ ಪ್ರಿ-ಕ್ವಾರ್ಟರ್ ಫೈನಲ್ ರೇಸ್‌ನಲ್ಲಿ ಉಳಿದುಕೊಂಡಿದೆ.

ತಾನಾಡಿದ ಎರಡನೇ ಪಂದ್ಯದಲ್ಲಿ ಮೊದಲ ಗೆಲುವು ದಾಖಲಿಸಿದ ಘಾನಾ 3 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಪೋರ್ಚುಗಲ್ ಬಳಿಕ ಎರಡನೇ ಸ್ಥಾನದಲ್ಲಿದೆ. ಘಾನಾ ತನ್ನ ಮೊದಲ ಪಂದ್ಯವನ್ನು ಸೋತಿತ್ತು.

ಎಜುಕೇಶನ್ ಸಿಟಿ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಘಾನಾ ತಂಡ 24ನೇ, 34ನೇ ಹಾಗೂ 68ನೇ ನಿಮಿಷದಲ್ಲಿ ಗೋಲು ಗಳಿಸಿತು. ಮುಹಮ್ಮದ್ ಕುಡುಸ್ 34ನೇ ಹಾಗೂ 68ನೇ ನಿಮಿಷದಲ್ಲಿ ಎರಡು ಗೋಲು ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ದಕ್ಷಿಣ ಕೊರಿಯಾ ತಂಡದ ಪರ ಚೊ ಗುಯ್-ಸಂಗ್ 58ನೇ ಹಾಗೂ 61ನೇ ನಿಮಿಷದಲ್ಲಿ ಅವಳಿ ಗೋಲು ಗಳಿಸಿದ ಪ್ರತಿರೋಧ ಒಡ್ಡಿದರು.

ಘಾನಾವು ಮೊದಲಾರ್ಧದ ಅಂತ್ಯಕ್ಕೆ 2-0 ಮುನ್ನಡೆ ಸಾಧಿಸಿ ಉತ್ತಮ ಆರಂಭ ಪಡೆದಿತ್ತು.

Similar News