ಪ್ರತಿಭಟನೆ ನಡೆಸಿದ್ದಕ್ಕೆ ಬಂಧಿಸಲ್ಪಟ್ಟ ವೈ.ಎಸ್. ಶರ್ಮಿಳಾರಿಗೆ ಜಾಮೀನು

Update: 2022-11-30 07:48 GMT

ಹೊಸದಿಲ್ಲಿ: ಆಡಳಿತಾರೂಢ ಟಿಆರ್‌ಎಸ್ ಕಾರ್ಯಕರ್ತರು ತನ್ನ ಪಾದಯಾತ್ರೆ ನಡೆಯುತ್ತಿರುವಾಗ ಬೆಂಗಾವಲು ಪಡೆ ಮೇಲೆ ನಡೆಸಿದ ದಾಳಿಯನ್ನು ಪ್ರತಿಭಟಿಸಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಅಧಿಕೃತ ನಿವಾಸದತ್ತ ಮೆರವಣಿಗೆ ನಡೆಸಿದ್ದಕ್ಕೆ  ನವೆಂಬರ್ 29 ರಂದು ಪೊಲೀಸರು ಬಂಧಿಸಿದ ನಂತರ ನಗರ ನ್ಯಾಯಾಲಯವು ವೈಎಸ್‌ಆರ್ ತೆಲಂಗಾಣ ಪಕ್ಷದ ಸಂಸ್ಥಾಪಕಿ ವೈ.ಎಸ್. ಶರ್ಮಿಳಾ ಅವರಿಗೆ ಜಾಮೀನು ಮಂಜೂರು ಮಾಡಿದೆ.

ಮೆರವಣಿಗೆಯ ಸಮಯದಲ್ಲಿ ಶರ್ಮಿಳಾ ಜಖಂಗೊಂಡಿರುವ ವಾಹನದೊಳಗೆ ಹೋಗುತ್ತಿರುವುದು ಹಾಗೂ ಕಾರನ್ನು  ಅವರೇ ಸ್ವತಃ ಓಡಿಸುತ್ತಿದ್ದಾಗ  ಪೊಲೀಸರು ತಡೆದಿರುವುದು ಟಿವಿ ದೃಶ್ಯದಲ್ಲಿ ಕಂಡುಬಂದಿದೆ.

ಶರ್ಮಿಳಾ ಕಾರಿನಿಂದ  ಹೊರಬರಲು ನಿರಾಕರಿಸಿದ ನಂತರ, ಪೊಲೀಸರು ಕ್ರೇನ್ ತಂದು ಶರ್ಮಿಳಾ ಕುಳಿತಿದ್ದ ವಾಹನವನ್ನು ಎಳೆದುಕೊಂಡು ಹೋಗಿರುವುದು ಭಾರೀ ಸುದ್ದಿಯಾಗಿತ್ತು.

ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅವರು ಶರ್ಮಿಳಾ ಅವರನ್ನು ಬಂಧಿಸಿದ ರೀತಿ ಹಗೂ  ಅವರ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಮಂಗಳವಾರ ರಾತ್ರಿ ರಾಜಭವನದ ಪ್ರಕಟಣೆ ತಿಳಿಸಿದೆ.

Similar News