ಫಿಫಾ ವಿಶ್ವಕಪ್: ಡೆನ್ಮಾರ್ಕ್‌ನ್ನು ಸೋಲಿಸಿದ ಆಸ್ಟ್ರೇಲಿಯ ಪ್ರಿ-ಕ್ವಾರ್ಟರ್ ಫೈನಲ್‌ಗೆ

ಫ್ರಾನ್ಸ್ ವಿರುದ್ಧ ಟ್ಯುನಿಶಿಯಕ್ಕೆ ಜಯ

Update: 2022-11-30 17:08 GMT

  ದೋಹಾ, ನ.30: ಫಿಫಾ ವಿಶ್ವಕಪ್‌ನ ಗ್ರೂಪ್ ಡಿ ಪಂದ್ಯದಲ್ಲಿ ಡೆನ್ಮಾರ್ಕ್ ತಂಡವನ್ನು 1-0 ಗೋಲುಗಳ ಅಂತರದಿಂದ ಮಣಿಸಿದ ಆಸ್ಟ್ರೇಲಿಯ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಅಲ್ ಜನಾಬ್ ಸ್ಟೇಡಿಯಮ್‌ನಲ್ಲಿ ನಡೆದ ಡಿ ಗುಂಪಿನ ಪಂದ್ಯದಲ್ಲಿ ಮೊದಲಾರ್ಧದ ಅಂತ್ಯಕ್ಕೆ ಎರಡೂ ತಂಡಗಳು ಗೋಲು ಗಳಿಸಲು ವಿಫಲವಾದವು. ದ್ವಿತೀಯಾರ್ಧದ 60ನೇ ನಿಮಿಷದಲ್ಲಿ ಮ್ಯಾಥ್ಯೂ ಲೇಕಿ ಗಳಿಸಿದ ಗೋಲು ನೆರವಿನಿಂದ ಆಸ್ಟ್ರೇಲಿಯವು 1-0 ಮುನ್ನಡೆ ಪಡೆಯಿತು. ಈ ಮುನ್ನಡೆಯನ್ನು ಕೊನೆಯ ತನಕ ಕಾಯ್ದುಕೊಂಡು ಗೆಲುವಿನ ನಗೆ ಬೀರಿತು.

3 ಪಂದ್ಯದಲ್ಲಿ 2ರಲ್ಲಿ ಜಯ ಸಾಧಿಸಿ ಆರು ಅಂಕ ಗಳಿಸಿರುವ ಆಸ್ಟ್ರೇಲಿಯ ಪ್ರಿ-ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆಯಿತು.

*ಫ್ರಾನ್ಸ್ ವಿರುದ್ಧ ಟ್ಯುನಿಶಿಯಕ್ಕೆ ಜಯ

ಬುಧವಾರ ಎಜುಕೇಶನ್ ಸಿಟಿ ಸ್ಟೇಡಿಯಮ್‌ನಲ್ಲಿ ನಡೆದ ಮತ್ತೊಂದು ಡಿ ಗುಂಪಿನ ಪಂದ್ಯದಲ್ಲಿ ಈಗಾಗಲೇ ಅಂತಿಮ-16ರ ಸುತ್ತು ತಲುಪಿರುವ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡ ಟ್ಯುನಿಶಿಯ ವಿರುದ್ಧ 0-1 ಅಂತರದಿಂದ ಸೋಲುಂಡಿತು.

ಮೊದಲಾರ್ಧದಲ್ಲಿ ಎರಡೂ ತಂಡಗಳಿಂದ ಗೋಲು ದಾಖಲಾಗಲಿಲ್ಲ. ಟ್ಯುನಿಶಿಯ ತಂಡ 58ನೇ ನಿಮಿಷದಲ್ಲಿ ಮುನ್ನಡೆ ಪಡೆಯಿತು. ಖಝ್ರಿ ಟ್ಯುನೀಶಿಯಕ್ಕೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು. ್.

Similar News