ಚತ್ತೀಸ್‌ಗಢ: ಗಣಿ ದುರಂತಕ್ಕೆ ಕನಿಷ್ಠ 7 ಮಂದಿ ಬಲಿ

Update: 2022-12-02 16:47 GMT

ಭೋಪಾಲ್,ಡಿ.2: ಚತ್ತೀಸ್‌ಗಡದ ಮಾಲ್‌ಗಾಂವ್‌ನಲ್ಲಿ ಸೀಮೆಸುಣ್ಣದ ಗಣಿಯೊಂದು ಕುಸಿದು ಬಿದ್ದು, ಕನಿಷ್ಠ ಏಳು ಮಂದಿ ಮೃತಪಟ್ಟಿದ್ದಾರೆ ಹಾಗೂ 12ಕ್ಕೂ ಅಧಿಕ ಗ್ರಾಮಸ್ಥರು ಸಿಕ್ಕಿಹಾಕಿಕೊಂಡಿರುವುದಾಗಿ ವರದಿಯಾಗಿದೆ. ಪೊಲೀಸರು ಹಾಗೂ ವಿಶೇಷ ವಿಪತ್ತು ನಿರ್ವಹಣಾ ಪಡೆಯು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಬಿರುಸಿನಿಂದ ನಡೆಯುತ್ತಿದೆ.

ಮೃತಪಟ್ಟ ಏಳು ಮಂದಿಯಲ್ಲಿ ಆರು ಮಂದಿ ಮಹಿಳೆಯರೆಂದು ಮೂಲಗಳು ತಿಳಿಸಿವೆ. ಈವರೆಗೆ ದುರಂತದ ಸ್ಥಳದಿಂದ ಇಬ್ಬರು ಗ್ರಾಮಸ್ಥರನ್ನು ರಕ್ಷಿಸಲಾಗಿದೆಯೆಂದು ತಿಳಿದುಬಂದಿದೆ.

ದುರಂತ ಸಂಭವಿಸಿದ ಮಾಲ್‌ಗಾಂವ್ ಗ್ರಾಮವು ಜಿಲ್ಲಾ ಕೇಂದ್ರ ಜಗದಾಳಪುರ್‌ನಿಂದ 13 ಕಿ.ಮೀ. ದೂರದಲ್ಲಿದೆ.

ಗಣಿಯೊಳಗಿದ್ದವರು ಮಣ್ಣನ್ನು ಅಗೆಯುತ್ತಿದ್ದಾಗ,ಅದರ ಒಂದು ಭಾಗವು ಕುಸಿದುಬದ್ದಿತ್ತು. ಆಗ  ಅವರೆಲ್ಲರೂ ಅವಶೇಷಗಳ ನಡುವೆ ಸಿಲುಕಿಕೊಂರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಸಿದ್ದಾರೆ.

ಘಟನೆಯಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದ ಇಬ್ಬರು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಸಾವನ್ನಪ್ಪಿದರೆಂದು ಅವರು ಹೇಳಿದ್ದಾರೆ.

Similar News