ಮುಂಬೈ: ಮನೆಗೆ ನುಗ್ಗಿ ಮಹಿಳೆಯ ಸಾಮೂಹಿಕ ಅತ್ಯಾಚಾರ; ಪ್ರಕರಣ ದಾಖಲು

Update: 2022-12-04 15:04 GMT

ಮುಂಬೈ,ಡಿ.4: ಮೂವರು ವ್ಯಕ್ತಿಗಳು 42 ವರ್ಷ ವಯಸ್ಸಿನ ಯುವತಿಯ ಮನೆಯೊಳಗೆ ಪ್ರವೇಶಿಸಿ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆಯ ಮುಂಬೈಯ ಕುರ್ಲಾ ಪ್ರದೇಶದಲ್ಲಿ ವರದಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮಹಿಳೆಗೆ ದುಷ್ಕರ್ಮಿಗಳು ಹರಿತವಾದ ಆಯುಧದಿಂದ ದಾಳಿ ನಡೆಸಿದ್ದು, ಆಕೆಯ ಗುಪ್ತಾಂಗಗಳಿಗೆ ಸಿಗರೇಟ್‌ಗಳಿಂದ ಸುಟ್ಟಗಾಯಗಳನ್ನುಂಟು ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

 ಬುಧವಾರ ನಸುಕಿನಲ್ಲಿ ಈ ಘಟನೆ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳು ಹಾಗೂ ಸಂತ್ರಸ್ತ ಮಹಿಳೆ ಒಂದೇ ಪ್ರದೇಶದ ನಿವಾಸಿಗಳೆಂದು ಅವರು ಹೇಳಿದ್ದಾರೆ.

  ಆರೋಪಿಗಳಲ್ಲೊಬ್ಬಾತ ಘಟನೆಯನ್ನು ವಿಡಿಯೋ ಚಿತ್ರೀಕರಿಸಿದ್ದು, ಒಂದು ವೇಳೆ ಪೊಲೀಸರಿಗೆ ದೂರು ನೀಡಿದಲ್ಲಿ ವೀಡಿಯೋವನ್ನು ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾಗಿ  ಪೊಲೀಸರು ತಿಳಿಸಿದ್ದಾರೆ.

    ಈ ಮೂವರು ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್‌ಗಳಾದ 376 (ಅತ್ಯಾಚಾರ), 376ಡಿ (ಸಾಮೂಹಿಕ ಅತ್ಯಾಚಾರ), 377 (ಅನೈಸರ್ಗಿಕ ಲೈಂಗಿಕ ಕ್ರಿಯೆ), 324 ( ಮಾರಕವಾದ ಆಯುಧದಿಂದ ಘಾಸಿಯುಂಟು ಮಾಡುವುದು) ರ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧನಕ್ಕಾಗಿ ಜಾಲವನ್ನು ಬೀಸಲಾಗಿದೆಯೆಂದು ಪೊಲೀರು ತಿಳಿಸಿದ್ದಾರೆ.

Similar News