ಐದು ರಾಜ್ಯಗಳ 1 ಲೋಕಸಭೆ, ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ಆರಂಭ

Update: 2022-12-05 04:38 GMT

ಹೊಸದಿಲ್ಲಿ: ಸಮಾಜವಾದಿ ಪಕ್ಷದ (ಎಸ್‌ಪಿ) ಭದ್ರಕೋಟೆ ಎಂದು ಕರೆಯಲ್ಪಡುವ ಉತ್ತರಪ್ರದೇಶದ ಮೈನ್‌ಪುರಿ ಲೋಕಸಭಾ ಕ್ಷೇತ್ರ ವಲ್ಲದೆ  ಐದು ರಾಜ್ಯಗಳ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಸೋಮವಾರ ಆರಂಭವಾಗಿರುವ  ಉಪಚುನಾವಣೆಯಲ್ಲಿ ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ.

ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ನಿಧನದ ನಂತರ ತೆರವಾದ ಮೈನ್‌ಪುರಿ ಸ್ಥಾನಕ್ಕೆ ಉಪಚುನಾವಣೆ ಅಗತ್ಯವಾಗಿತ್ತು.

ಉತ್ತರ ಪ್ರದೇಶದ ರಾಂಪುರಸದರ್ ಹಾಗೂ  ಖತೌಲಿ, ಒಡಿಶಾದ ಪದಾಂಪುರ, ರಾಜಸ್ಥಾನದ ಸರ್ದರ್ಶಹರ್, ಬಿಹಾರದ ಕುರ್ಹಾನಿ ಹಾಗೂ  ಛತ್ತೀಸ್‌ಗಢದ ಭಾನುಪ್ರತಾಪುರ್ ವಿಧಾನಸಭಾ ಕ್ಷೇತ್ರಗಳು ಸೋಮವಾರ ಉಪಚುನಾವಣೆ ನಡೆಯಲಿವೆ.

ರಾಜಸ್ಥಾನದಲ್ಲಿ ಕಾಂಗ್ರೆಸ್ ಶಾಸಕ ಭನ್ವರ್ ಲಾಲ್ ಶರ್ಮಾ ಅವರ ನಿಧನದ ನಂತರ ತೆರವಾದ ಸರ್ದರ್ಶಹರ್ ಸ್ಥಾನಕ್ಕೆ ಚುನಾವಣೆ  ನಡೆಯಲಿದೆ. ಒಡಿಶಾದಲ್ಲಿ, ಬಿಜು ಜನತಾ ದಳ (ಬಿಜೆಡಿ) ಶಾಸಕ ಬಿಜಯ್ ರಂಜನ್ ಸಿಂಗ್ ಬರಿಹಾ ಅವರ ನಿಧನದಿಂದ ಒಡಿಶಾದ ಪದಂಪುರ ಕ್ಷೇತ್ರಕ್ಕೆ ಉಪಚುನಾವಣೆ ಅಗತ್ಯವಾಗಿತ್ತು. ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಛತ್ತೀಸ್‌ಗಢದ ಭಾನುಪ್ರತಾಪುರ್ ಕ್ಷೇತ್ರಕ್ಕೆ ಕಾಂಗ್ರೆಸ್ ಶಾಸಕ ಹಾಗೂ  ವಿಧಾನಸಭೆಯ ಉಪಸಭಾಪತಿ ಮನೋಜ್ ಸಿಂಗ್ ಮಾಂಡವಿ ಅವರ ನಿಧನದಿಂದಾಗಿ ಉಪಚುನಾವಣೆ ಅನಿವಾರ್ಯವಾಗಿತ್ತು.

Similar News