×
Ad

ಮಲ್ಪೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳವು

Update: 2022-12-05 20:51 IST

ಮಲ್ಪೆ: ಕಿನ್ನಿಮುಲ್ಕಿಯ ಕನ್ನರಪಾಡಿ ಕಾಲನಿಯಲ್ಲಿ ಡಿ.3ರಂದು ರಾತ್ರಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ವಿರೂಪಾಕ್ಷ ಕೆ. ತನ್ನ ಹೆಂಡತಿ ಮಕ್ಕಳೊಂದಿಗೆ ತಾಯಿಯ ಮನೆಯಾದ ಕುಂದಾಪುರಕ್ಕೆ ಹೋಗಿದ್ದ ವೇಳೆ, ಮನೆಯ ಎದುರಿನ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು, ಬೆಡ್‌ರೂಮಿನ ಕಪಾಟಿನಲ್ಲಿದ್ದ ಹವಳದ ಸರ, ಚಿನ್ನದ ಸರ, ಚಿನ್ನದ ಕಾಯಿನ್ ಸೇರಿದಂತೆ ಒಟ್ಟು 98 ಗ್ರಾಂ ಚಿನ್ನ ಹಾಗೂ ಬೆಳ್ಳಿಯ 2 ಲೋಟಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಒಟ್ಟು ಮೌಲ್ಯ 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News