ಜಿ20ಗೆ ತಾವರೆಗೆ ಬದಲು ಬೇರೆ ಲಾಂಛನ ಆರಿಸಬಹುದಾಗಿತ್ತು ಎಂದು : ಮಮತಾ ಬ್ಯಾನರ್ಜಿ

Update: 2022-12-05 16:50 GMT

ಕೋಲ್ಕತಾ, ಡಿ. 5: ಜಿ20 ದೇಶಗಳ ಗುಂಪಿನ ಲಾಂಛನದಲ್ಲಿ ತಾವರೆಯನ್ನು ಬಳಸಿರುವುದು ವಿವಾದರಹಿತವೇನಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee)ಸೋಮವಾರ ಹೇಳಿದ್ದಾರೆ. ಆದರೆ, ನಾನು ವಿಷಯದ ಬಗ್ಗೆ ಮಾತನಾಡುವುದಿಲ್ಲ, ಯಾಕೆಂದರೆ ಆ ವಿಷಯದ ಬಗ್ಗೆ ದೇಶದ ಹೊರಗಡೆ ಚರ್ಚೆ ನಡೆದರೆ ಅದು ನಮ್ಮ ದೇಶಕ್ಕೆ ಒಳ್ಳೆಯದಲ್ಲ ಎಂದು ಅವರು ನುಡಿದರು.

ಶೃಂಗಸಭೆಯ ಲಾಂಛನವಾಗಿ, ತಾವರೆಗೆ ಬದಲು ಇತರ ಯಾವುದೇ ರಾಷ್ಟ್ರೀಯ ಚಿಹ್ನೆಯನ್ನು ಕೇಂದ್ರ ಸರಕಾರ ಆರಿಸಬಹುದಾಗಿತ್ತು ಎಂದು ಮುಖ್ಯಮಂತ್ರಿ ಹೇಳಿದರು. ಯಾಕೆಂದರೆ, ಈ ಪುಷ್ಪವು ರಾಜಕೀಯ ಪಕ್ಷವೊಂದನ್ನು ಪ್ರತಿನಿಧಿಸುತ್ತದೆ ಎಂದರು.

ಭಾರತೀಯ ಜನತಾ ಪಕ್ಷಕ್ಕೆ ಪ್ರಚಾರ ನೀಡುವ ಉದ್ದೇಶದಿಂದ ಕೇಂದ್ರ ಸರಕಾರವು ಜಿ20 ಲಾಂಛನದಲ್ಲಿ ತಾವರೆಯನ್ನು ಬಳಸಿದೆ ಎಂಬುದಾಗಿ ಕಾಂಗ್ರೆಸ್ ಕೂಡ ಆರೋಪಿಸಿದೆ.

ಆರೋಪಗಳಿಗೆ ಪ್ರತಿಕ್ರಿಯಿಸಿರುವ ರಕ್ಷಣ ಸಚಿವ ರಾಜ್ ನಾಥ್ ಸಿಂಗ್, ತಾವರೆಯು ದೇಶದ ಸಾಂಸ್ಕೃತಿಕ ಗುರುತಾಗಿದೆ ಎಂದರು.

Similar News