​ಕುರಿ, ಮೇಕೆ ಘಟಕ ವಿತರಣೆಗೆ ಅರ್ಜಿ ಆಹ್ವಾನ

Update: 2022-12-06 13:36 GMT

ಮಂಗಳೂರು, ಡಿ.6: ಸಹಾಯಧನದಲ್ಲಿ ಮಿಶ್ರ ತಳಿ ಹಸು, ಸುಧಾರಿತ ತಳಿ ಎಮ್ಮೆ ಘಟಕ ಹಾಗೂ ಕುರಿ, ಮೇಕೆ ಘಟಕ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ.

ಹಸು, ಎಮ್ಮೆ ಘಟಕ ವೆಚ್ಚ 60,000 ರೂ. ಹಾಗೂ ಕುರಿ, ಮೇಕೆ ಘಟಕ ವೆಚ್ಚ 66,000 ರೂ., ಪ.ಜಾತಿ ಮತ್ತು ಪ.ಪಂಗಡ ವರ್ಗಕ್ಕೆ ಸೇರಿದ ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು ಮತ್ತು ಪಶುಸಂಗೋಪನೆಯಲ್ಲಿ ತೊಡಗಿದವರು ಸಂಬಂಧಿಸಿದ ತಾಲೂಕು ಪಶು ಆಸ್ಪತ್ರೆಯಿಂದ ಅರ್ಜಿ ಪಡೆದು ಡಿ.30ರೊಳಗೆ ಸಲ್ಲಿಸಬೇಕು.

ಮಾಹಿತಿಗೆ ತಾಲೂಕು ಮುಖ್ಯ ಪಶುವೈದ್ಯ ಅಧಿಕಾರಿಗಳಾದ ಬಂಟ್ವಾಳ-9481445365, ಬೆಳ್ತಂಗಡಿ-9448533922, ಮಂಗಳೂರು- 9243306956, ಮೂಡುಬಿದಿರೆ-7204271943, ಪುತ್ತೂರು- 9448624950, ಕಡಬ-9483922594, ಸುಳ್ಯ-9844995078ನ್ನು ಸಂಪರ್ಕಿಸಬಹುದು ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ.

Similar News