ಅಫ್ಘಾನಿಸ್ತಾನ: ಬಾಂಬ್ ಸ್ಫೋಟದಲ್ಲಿ 6 ಮಂದಿ ಮೃತ್ಯು

Update: 2022-12-06 17:12 GMT

ಕಾಬೂಲ್, ಡಿ.6: ಉತ್ತರ ಅಫ್ಘಾನಿಸ್ತಾನ(Afghanistan)ದಲ್ಲಿ ಮಂಗಳವಾರ ಸರಕಾರಿ ಸಿಬಂದಿಗಳು ಪ್ರಯಾಣಿಸುತ್ತಿದ್ದ ಬಸ್ಸಿನ ಬಳಿ ಬಾಂಬ್ ಸ್ಫೋಟಗೊಂಡಿದ್ದು 6 ಮಂದಿ ಮೃತಪಟ್ಟಿದ್ದು ಇತರ 7 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಬಾಖ್ ಪ್ರಾಂತದ ಮಝರೆ ಶರೀಫ್ (Mazare Sharif)ನಗರದಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಚಕ್ಕಡಿಯಲ್ಲಿ ಬಾಂಬ್ ಇರಿಸಲಾಗಿತ್ತು. ಸರಕಾರಿ ಸ್ವಾಮ್ಯದ ಗ್ಯಾಸ್ ಮತ್ತು ಪೆಟ್ರೋಲಿಯಂ ಸಂಸ್ಥೆಯ ಸಿಬಂದಿಗಳು ತೆರಳುತ್ತಿದ್ದ ಬಸ್ಸು ಚಕ್ಕಡಿಯ ಬಳಿ ಬಂದಾಗ ದೂರ ನಿಯಂತ್ರಕ ಸಾಧನದಿಂದ ಬಾಂಬನ್ನು ಸ್ಫೋಟಿಸಲಾಗಿದೆ ಎಂದು ಪ್ರಾಂತದ ಪೊಲೀಸ್ ಇಲಾಖೆಯ ವಕ್ತಾರ ಮುಹಮ್ಮದ್ ಆಸಿಫ್ ವಝೀರಿ(Muhammad Asif Waziri) ಹೇಳಿದ್ದಾರೆ. ಮತ್ತೊಂದು ಘಟನೆಯಲ್ಲಿ, ಜಲಾಲಾಬಾದ್‍ನ ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟಿಸಿ ಕನಿಷ್ಟ 6 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.  

Similar News