ಕಾಂಗ್ರೆಸ್ ನೇತೃತ್ವದ ಕಾರ್ಯತಂತ್ರದ ಸಭೆಯಲ್ಲಿ ಎಎಪಿ, ತೃಣಮೂಲದ ನಾಯಕರು ಭಾಗಿ!

Update: 2022-12-07 08:33 GMT

ಹೊಸದಿಲ್ಲಿ: ಇಂದು ಬೆಳಗ್ಗೆ ಸಂಸತ್ತಿನಲ್ಲಿ ನಡೆದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರೋಧ ಪಕ್ಷಗಳ ಸಭೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ತೃಣಮೂಲ ಕಾಂಗ್ರೆಸ್ ನಾಯಕರು  ಭಾಗವಹಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ವಾರಗಳ ನಂತರ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಉಳಿದಿರುವ ಖರ್ಗೆ ಅವರು ಇಂದು ಆರಂಭವಾದ ಚಳಿಗಾಲದ ಅಧಿವೇಶನಕ್ಕಾಗಿ ಜಂಟಿ ಕಾರ್ಯತಂತ್ರದ ಕುರಿತಾಗಿ  ಚರ್ಚಿಸಲು "ಸಮಾನ ಮನಸ್ಸಿನ ವಿರೋಧ ಪಕ್ಷಗಳ" ಸಭೆಯನ್ನು ಕರೆದಿದ್ದರು.

ಎಎಪಿ  ಹಾಗೂ  ತೃಣಮೂಲ ನಾಯಕರು ಸಭೆಗೆ ಕಾಣಿಸಿಕೊಂಡಿರುವುದು ಆಶ್ಚರ್ಯಕರವಾಗಿತ್ತು, ಏಕೆಂದರೆ ಎರಡೂ ಪಕ್ಷಗಳು ಕಾಂಗ್ರೆಸ್‌ನಿಂದ ಹಿಂದೆ ಸರಿದಿದ್ದವು. ಮುಂಗಾರು ಅಧಿವೇಶನದಲ್ಲಿ ಸಂಸತ್ತಿನಲ್ಲಿ ಕಾಂಗ್ರೆಸ್ ನೇತೃತ್ವದ ಒಂದೇ ಒಂದು ಪ್ರತಿಭಟನೆಗೆ ಈ ಪಕ್ಷಗಳು ಸಾಥ್ ನೀಡಿಲ್ಲ.

Similar News