×
Ad

ದಿಲ್ಲಿಯ ಸುಲ್ತಾನಪುರಿ ವಾರ್ಡ್‌ನಿಂದ ಆಯ್ಕೆಯಾದ ಆಪ್‌ನ ಬೋಬಿ MCDಯ ಮೊದಲ ತೃತೀಯ ಲಿಂಗಿ ಕೌನ್ಸಿಲರ್‌

Update: 2022-12-07 18:00 IST

ಹೊಸದಿಲ್ಲಿ: ದಿಲ್ಲಿಯ ಸುಲ್ತಾನ್‌ಪುರಿ-ಎ ವಾರ್ಡ್‌ನಲ್ಲಿ ಐತಿಹಾಸಿಕ ವಿಜಯ ಸಾಧಿಸಿರುವ ಆಪ್‌ (AAP) ಅಭ್ಯರ್ಥಿ ಬೋಬಿ ಕಿನ್ನಾರ್  (Bobby Kinnar),  ದಿಲ್ಲಿ ಮುನಿಸಿಪಲ್‌ ಕಾರ್ಪೊರೇಷನ್‌ನ ಪ್ರಥಮ ತೃತೀಯ ಲಿಂಗಿ  ಸಮುದಾಯದ ಕೌನ್ಸಿಲರ್‌ ಆಗಿದ್ದಾರೆ.

ಈ ನಿರ್ದಿಷ್ಟ ವಾರ್ಡಿನಲ್ಲಿ ಬೋಬಿ ಅವರು ಬಿಜೆಪಿಯ ಏಕ್ತಾ, ಬಿಎಸ್ಪಿಯ ಸುನೈನಾ, ಕಾಂಗ್ರೆಸ್‌ ಪಕ್ಷದ ವರುಣಾ ಧಾಕ ಮತ್ತು ಎನ್ಸಿಪಿಯ ಮಂಜೀತಾ ಅವರನ್ನು ಸೋಲಿಸಿದ್ದಾರೆ.

ಎಂಟನೇ ತರಗತಿಯಲ್ಲಿ ಕಲಿಯುತ್ತಿರುವಾಗಲೇ ಶಿಕ್ಷಣವನ್ನು ಅರ್ಧದಲ್ಲಿಯೇ ಕೈಬಿಟ್ಟ ಬೋಬಿ ನಂತರ ತಮ್ಮನ್ನು ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ತಮ್ಮ ಪ್ರದೇಶದ ಮಕ್ಕಳಿಗಾಗಿ ಅವರು ಪ್ರಾಥಮಿಕ ಶಾಲೆಯೊಂದನ್ನೂ ನಡೆಸುತ್ತಿದ್ದಾರೆ.

ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನದ ಕಾಲದಿಂದ ಬೋಬಿ ಅವರು ಆಪ್‌ ಜೊತೆಗಿದ್ದಾರೆ. ತಮ್ಮ ವಿಜಯದ ಶ್ರೇಯವನ್ನು ತಮಗಾಗಿ ಅವಿರತ ಶ್ರಮಿಸಿದ ಎಲ್ಲರಿಗೂ ಅವರು ಸಲ್ಲಿಸಿದ್ದಾರೆ ಹಾಗೂ ತಮ್ಮ ವಾರ್ಡಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ.

Similar News