ಧಾರ್ಮಿಕ ಸ್ವಾತಂತ್ರ್ಯ ಕಾಪಾಡಲು ಭಾರತಕ್ಕೆ ನೆರವು: ಅಮೆರಿಕ

Update: 2022-12-07 16:22 GMT

ವಾಶಿಂಗ್ಟನ್,ಡಿ.7: ಭಾರತವು ವೈವಿಧ್ಯಮಯ ಧರ್ಮಗಳ ತವರಾಗಿದೆ ಹಾಗೂ ಎಲ್ಲರ ಧಾರ್ಮಿಕ ಸ್ವಾತಂತ್ರ್ಯ ವನ್ನು ಎತ್ತಿಹಿಡಿಯಲು ಅದಕ್ಕೆ ಬೈಡನ್ (Biden)ಆಡಳಿತವು ನೆರವಾಗಲಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ ನೆಡ್ ಪ್ರೈಸ್ (Ned Price)ತಿಳಿಸಿದ್ದಾರೆ. ಭಾರತ, ಚೀನಾ, ಪಾಕಿಸ್ತಾನ ಸೇರಿದಂತೆ 12 ದೇಶಗಳನ್ನು ‘‘ ನಿರ್ದಿಷ್ಟ ಆತಂಕದ ದೇಶಗಳು’’(Countries of particular concern)ಎಂಬುದಾಗಿ ಗುರುತಿಸಿದ ಕೆಲವೇ ದಿನಗಳ ಆನಂತರ ಅವರು ವಾಶಿಂಗ್ಟನ್‌ನಲ್ಲಿ ನಜೆದ ಸುದ್ದಿಗೋಷ್ಠಿಯಲ್ಲಿ ಈ ಹೇಳಿಕೆ ನೀಡಿದ್ದಾರೆ.

  ಮಾನವಹಕ್ಕುಗಳ ವಿಷಯದಲ್ಲಿ ಭಾರತವನ್ನು ಯಾಕೆ ನಿರ್ದಿಷ್ಟ ಕಳವಳದ ದೇಶಳ ಸಾಲಿಗೆ ಸೇರಿಸಿಲ್ಲವೆಂಬ ಸುದ್ದಿಗಾರರ ಪ್ರಶ್ನೆಗೆ ಸ್ಪಷ್ಟನೆ ನೀಡಿರುವ ನೆಡ್ ಪ್ರೈಸ್ ಅವರು ಭಾರತವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ವಿವಿಧ ಧರ್ಮಗಳ ತವರೂರಾಗಿದೆ ಎಂದು ಳಿಸಿದ್ದಾರೆ.

ಎಲ್ಲರ ಧಾರ್ಮಿಕ ಸ್ವಾತಂತ್ರವನ್ನು ರಕ್ಷಿಸುವ ತನ್ನ ಬದ್ಧತೆಯನ್ನು ಭಾರತವು ಎತ್ತಿಹಿಡಿಯುವಂತೆ ಮಾಡಲು ಆ ದೇಶಕ್ಕೆ ಎಲ್ಲ ರೀತಿಯ ಉತ್ತೇಜನಗಳನ್ನು ನೀಡುವುದನ್ನು ಬೈಡನ್ ಆಡಳಿತವು ಮುಂದುವರಿಸಲಿದೆ ಎಂದು ಪ್ರೈಸ್ ತಿಳಿಸಿದರು.

‘‘ಧಾರ್ಮಿಕ ಸ್ವಾತಂತ್ರದ ಸುಧಾರಣೆಗಳ ಕುರಿತಂತೆ ಅಮೆರಿಕವು ನಿಯಮಿತವಾಗಿ ವಿವಿಧ ದೇಶಗಳ ಅಧಿಕಾರಿಗಳ ಜೊತೆ ಮಾತುಕತೆಗಳನ್ನು ನಡೆಸುತ್ತಿರುತ್ತೇವೆ. ಜಗತ್ತಿನ ಎರಡು ಬೃಹತ್ ಪ್ರಜಾಪ್ರಭುತ್ವವಾದಿ ರಾಷ್ಟ್ರಗಳಾದ ಭಾರತ ಹಾಗೂ ಅಮೆರಿಕಗಳು ಕೂಡಾ ಈ ಯೋಜನೆಗೆ ಬದ್ಧರಾಗಿವೆ’’ ಎಂದು ಬೈಡನ್ ತಿಳಿಸಿದ್ದಾರೆ.

    ನಮ್ಮ ಪ್ರಜಾಪ್ರಭುತ್ವಗಳು, ನಮ್ಮ ಜನತೆಯ ಆಶೋತ್ತರಗಳಿಗೆ ಸ್ಪಂದಿಸಬಲ್ಲುದು ಎನ್ನುವುದನ್ನ್ನು ತೋರಿಸಲು ನಾವಿಬ್ಬರೂ ಒಟ್ಟಾಗಿ ಶ್ರಮಿಸಬಹುದಾಗಿದೆ. ಧಾರ್ಮಿಕ ಸ್ವಾತಂತ್ರ್ಯ ಹಾಗೂ ಶ್ರದ್ಧೆ ಅಥವಾ ಅಭಿವ್ಯಕ್ತಿ ಸ್ವಾತಂತ್ರದಂತಹ ಮಾನವಹಕ್ಕುಗಳಿಗೆ ಗೌರವ ಸೇರಿದಂತೆ ನಮ್ಮ ಪ್ರಧಾನ ವೌಲ್ಯಗಳನ್ನು ಎತ್ತಿಹಿಡಿಯುವುದನ್ನು ನಾವು ಮುಂದುವರಿಸಬೇಕಾಗಿದೆ’’ ಎಂದು ಪ್ರೈಸ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು.

 ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಭಾರತವನ್ನು ಬೈಡೆನ್ ಆಡಳಿತವು ವಿಶೇಷ ಕಳವಳದ ರಾಷ್ಟ್ರಗಳ ಪಟ್ಟಿಗೆ ಸೇರಿಸಿದರೂ ಅದನ್ನು ವಿಶೇಷ ಕಣ್ಗಾವಲು ಪಟ್ಟಿಯಲ್ಲಿ ಇರಿಸಲಾಗಿಲ್ಲವೆಂದು ಪ್ರೈಸ್ ತಿಳಿಸಿದ್ದಾರೆ.    ಭಾರತದಲ್ಲಿ ಧಾರ್ಮಿಕ ಸ್ವಾತಂತ್ರದ ಪರಿಸ್ಥಿತಿ ಕುರಿತಂತೆ ಅಮೆರಿಕ ವಿದೇಶಾಂಗ ಇಲಾಖೆಯ ಟೀಕೆಯನ್ನು ಭಾರತವು ತಳ್ಳಿಹಾಕಿದೆ. ಅಂತಾರಾಷ್ಟ್ರೀಯ ಬಾಂಧವ್ಯದಲ್ಲಿಯೂ ವೋಟ್‌ಬ್ಯಾಂಕ್ ರಾಜಕೀಯವನ್ನು ಅನುಸರಿಸುವುದು ‘ಕಳವಳಕರ’ ಎಂದವರು ಹೇಳಿದ್ದಾರೆ.

 ಅಮೆರಿಕದ ವಿದೇಶಾಂಗ ಇಲಾಖೆಯುಧಾರ್ಮಿಕ ಸ್ವಾತಂತ್ರ ಕುರಿತ ತನ್ನ 2021ರ ವರದಿಯಲ್ಲಿ ಭಾರತವನ್ನು ವಿಶೇಷ ಕಳವದ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಗೊಳಿಸಿತ್ತು. ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆದ ದಾಳಿಗಳ ಘಟನೆಗಳನ್ನು ಅದು ಉಲ್ಲೇಖಿಸಿತ್ತು

 ಧಾರ್ಮಿಕ ಸ್ವಾತಂತ್ಯದ ಪ್ರಸಕ್ತ ಸ್ಥಿತಿಗತಿಯನ್ನು ಆಧರಿಸಿ ಭಾರತ, ಚೀನಾ, ಪಾಕಿಸ್ತಾನ, ಮ್ಯಾನ್ಮಾರ್ ಸಹಿತ 12 ದೇಶಗಳನ್ನು ‘‘ ನಿರ್ದಿಷ್ಟ ಕಳವಳದ ದೇಶಗಳು’’ ಎಂಬುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಶುಕ್ರವಾರ ಪ್ರಕಟಿಸಿದ್ದರು.

Similar News