ಆಪ್‌ಗೆ ಗೆಲುವಿನ ಜೊತೆಗೆ ಹೊಣೆಗಾರಿಕೆಯೂ ದೊರೆತಿದೆ: ಮನೀಶ್ ಸಿಸೋಡಿಯಾ

Update: 2022-12-07 16:14 GMT

  ಹೊಸದಿಲ್ಲಿ,ಡಿ.7: ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆ (ಎಂಸಿಡಿ)ಯಲ್ಲಿ ಆಮ್‌ಆದ್ಮಿ ಪಕ್ಷಕ್ಕೆ ಗೆಲುವಿನ ಜೊತೆಗೆ ದೊಡ್ಡ ಹೊಣೆಗಾರಿಕೆಯೂ ದೊರೆತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಹಿರಿಯ ಆಪ್ ನಾಯಕ ಮನೀಶ್ ಸಿಸೋಡಿಯಾ(Manish Sisodia) ಬುಧವಾರ ಟ್ವೀಟ್ ಮಾಡಿದ್ದಾರೆ.

 ಎಂಸಿಡಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಸ್ಪಷ್ಟ ಬಹುಮತವನ್ನು ಪಡೆಯುತ್ತಿದ್ದಂತೆಯೇ ಟ್ವೀಟ್ ಮಾಡಿರುವ ಅವರು ‘ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಮೇಲೆ ವಿಶ್ವಾಸವಿರಿಸಿದ್ದಕ್ಕಾಗಿ ನಾವು ದಿಲ್ಲಿಯ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇವೆ. ಜನತೆಯು ಜಗತ್ತಿನ ಅತಿ ದೊಡ್ಡ ಹಾಗೂ ಅತ್ಯಂತ ಋಣಾತ್ಮಕವಾದ ಪಕ್ಷವೊಂದನ್ನು ಸೋಲಿಸಿದ್ದಾರೆ ಹಾಗೂ ಪ್ರಾಮಾಣಿಕರಾದ ಅರವಿಂದ್ ಕೇಜ್ರಿವಾಲ್(Arvind Kejriwal) ಅವರ ಗೆಲುವನ್ನು ಖಚಿತಪಡಿಸಿದ್ದಾರೆ’’ ಎಂದರು.

‘‘ ನಮ್ಮ ಪಾಲಿಗೆ ಇದು ಕೇವಲ ಗೆಲುವಲ್ಲ, ಆದರೆ ಅತಿ ದೊಡ್ಡ ಹೊಣೆಗಾರಿಕೆಯಾಗಿದೆ’ ಎಂದು ಸಿಸೋಡಿಯಾ ಟ್ವೀಟಸಿದ್ದಾರೆ.

ಆಮ್ ಆದ್ಮಿ ಪಕ್ಷದ ಇನ್ನೋರ್ವ ಹಿರಿಯ ನಾಯಕ ಹಾಗೂ ಲೋಕಸಭಾ ಸದಸ್ಯ ರಾಘವ್ ಚಡ್ಡಾ(Raghav Chadha) ಕೂಡಾ ಎಂಸಿಡಿ ಫಲಿತಾಂಶವನ್ನು ಸ್ವಾಗತಿಸಿದ್ದಾರೆ.

   ‘‘ದಿಲ್ಲಿಗೆ ಧನ್ಯವಾದ!. ಎಂಸಿಡಿ ಚುನಾವಣೆಯಲ್ಲಿ ಆಪ್‌ನ ಗೆಲುವು ಅರವಿಂದ ಕೇಜ್ರಿವಾಲ್‌ಜೀ ಅವರ ನಾಯಕತ್ವ ಹಾಗೂ ದೂರದೃಷ್ಟಿಯ ಮೇಲೆ ನೀವು ಇರಿಸಿ ನಂಬಿಕೆಯ ಪ್ರತಿಬಿಂಬವಾಗಿದೆ. ನಿರ್ಲಕ್ಷ, ಸುಳ್ಳು ಹಾಗೂ ರಾಜಕೀಯದ ಕೆಸರೆರಾಚಟದಿಂದ ದಿಲ್ಲಿಯನ್ನು ನಾಶಪಡಿಸಲು ಬಯಸಿದವರ ವಿರುದ್ಧ ನಿಮಗೆ ದೊರೆತ ಗೆಲುವು ಇದಾಗಿದೆ. ದಿಲ್ಲಿ ನಿರ್ಮಲ ಹಾಗೂ ಹಸಿರಾಗಲಿದೆ’’ ಎಂದು ಚಡ್ಡಾ ಟ್ವೀಟಿಸಿದ್ದಾರೆ.

Similar News