ಕುಂದಾಪುರ: ಹೊಟೇಲಿನ ರೂಮಿಗೆ ನುಗ್ಗಿ ಮೊಬೈಲ್, ನಗದು ಕಳವು

Update: 2022-12-07 16:27 GMT

ಕುಂದಾಪುರ : ಹೊಟೇಲ್ ರೂಮಿಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಮೊಬೈಲ್ ಹಾಗೂ ನಗದು ಕಳವು ಮಾಡಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿ.5ರಂದು ರಾತ್ರಿ ಮುಬಸ್ಸೀರ್ ಮತ್ತು ಅವರ ಸ್ನೇಹಿತ ರಿಯಾಝ್ ಎಂಬವರು ಉಳಿದುಕೊಂಡಿದ್ದ ಕುಂದಾಪುರದ ಶಿವಪ್ರಸಾದ ಗ್ರ್ಯಾಂಡ್ ಹೋಟೆಲಿನ ರೂಂನ ಬಾಗಿಲನ್ನು ತೆಗೆದು ಒಳಪ್ರವೇಶಿಸಿದ ಕಳ್ಳರು, ರಿಯಾಝ್ ಅವರ ಎರಡು ಮೊಬೈಲ್ ಮತ್ತು 1,38‌,000ರೂ. ನಗದು ಹಾಗೂ ಮುಬಸ್ಸಿರ್ ಅವರ ಪರ್ಸಿನಲ್ಲಿದ್ದ 12,000ರೂ. ನಗದು ಸೇರಿದಂತೆ ಒಟ್ಟು 2,40,000 ರೂ. ನಗದು ಮತ್ತು ಮೊಬೈಲ್ ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ.

Similar News