ರೈಲುಗಳ ಡಿಕ್ಕಿ: 150ಕ್ಕೂ ಅಧಿಕ ಮಂದಿಗೆ ಗಾಯ

Update: 2022-12-07 16:56 GMT

ಮ್ಯಾಡ್ರಿಡ್, ಡಿ.7: ನಿಲ್ದಾಣದಲ್ಲಿ ನಿಂತಿದ್ದ ರೈಲಿಗೆ ಅದೇ ಹಳಿಯಲ್ಲಿ ಬಂದ ಮತ್ತೊಂದು ರೈಲು ಹಿಂಬದಿಯಿಂದ ಡಿಕ್ಕಿಯಾಗಿ 150ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಸ್ಪೇನ್‌ನ ಬಾರ್ಸೆಲೋನಾ ನಗರದ ಬಳಿ ನಡೆದಿರುವುದಾಗಿ ವರದಿಯಾಗಿದೆ.

ಮೊಂಟ್‌ಕಾಡ ರಿಯಾಕ್ಸಕ್-ಮನ್ರೆಸ ನಿಲ್ದಾಣದಲ್ಲಿ ಬುಧವಾರ ಬೆಳಿಗ್ಗೆ 7:50ಕ್ಕೆ ದುರಂತ ಸಂಭವಿಸಿದೆ. ಬಾರ್ಸೆಲೋನಾಕ್ಕೆ ತೆರಳು ವ ಹಳಿಯಲ್ಲಿ ನಿಂತಿದ್ದ ರೈಲಿನ ಹಿಂಬದಿಗೆ ಮತ್ತೊಂದು ರೈಲು ಡಿಕ್ಕಿಯಾಗಿದೆ. ಹೆಚ್ಚಿನವರು ಅಲ್ಪಪ್ರಮಾಣದಲ್ಲಿ ಗಾಯಗೊಂಡಿದ್ದು 5 ಮಂದಿಗೆ ಗಂಭೀರ ಗಾಯವಾಗಿದೆ. ಅಪಘಾತದ ಬಳಿಕ ಎರಡೂ ದಿಕ್ಕಿನಿಂದ ಬರುವ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಎಸ್‌ಇಎಮ್ ಪ್ರಾದೇಶಿಕ ತುರ್ತು ಸೇವಾ ವಿಭಾಗದ ವಕ್ತಾರರನ್ನು ಉಲ್ಲೇಖಿಸಿ ಎಎಫ್‌ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

Similar News