ರಾಣಾ ಅಯ್ಯುಬ್‍ಗೆ ಅಮೆರಿಕಾದ ಅತ್ಯುನ್ನತ ಮಾಧ್ಯಮ ಸ್ವಾತಂತ್ರ್ಯ ಪ್ರಶಸ್ತಿ

Update: 2022-12-08 08:00 GMT

ನ್ಯೂಯಾರ್ಕ್: ಖ್ಯಾತ ಭಾರತೀಯ ಪತ್ರಕರ್ತೆ ರಾಣಾ ಅಯ್ಯುಬ್‍ (Rana Ayyub) ಅವರಿಗೆ ಅಮೆರಿಕಾದಲ್ಲಿ ಪ್ರತಿಷ್ಠಿತ ಜಾನ್ ಔಬುಚೊನ್ ಪ್ರೆಸ್ ಫ್ರೀಡಂ ಪ್ರಶಸ್ತಿಯನ್ನು ( John Aubuchon Press Freedom Award) 2022 ಫೋರ್ತ್ ಎಸ್ಟೇಟ್ ಅವಾರ್ಡ್ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

ವಾಷಿಂಗ್ಟನ್ ಡಿಸಿ ಯ ನ್ಯಾಷನಲ್ ಪ್ರೆಸ್ ಕ್ಲಬ್ ನೀಡುವ ಈ ಪ್ರಶಸ್ತಿಯು ಮಾಧ್ಯಮ ಸ್ವಾತಂತ್ರ್ಯ ಕ್ಷೇತ್ರದಲ್ಲಿ ಕ್ಲಬ್ ನೀಡುವ ಅತ್ಯುನ್ನತ ಪ್ರಶಸ್ತಿಯಾಗಿದೆ.

ರಾಣಾ ಅಯ್ಯುಬ್ ಅವರು ವಾಷಿಂಗ್ಟನ್ ಪೋಸ್ಟ್ ನ ಗ್ಲೋಬಲ್ ಒಪಿನಿಯನ್ಸ್ ವಿಭಾಗದ ಬರಹಗಾರ್ತಿಯಾಗಿದ್ದಾರೆ. ತನಿಖಾ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಹಾಗೂ ಮಾಧ್ಯಮ ಸ್ವಾತಂತ್ರ್ಯಕ್ಕಾಗಿ ರಾಣಾ ಅಯ್ಯುಬ್ ಪಟ್ಟ ಶ್ರಮವನ್ನು ಈ ಪ್ರಶಸ್ತಿ ಘೋಷಿಸುವ ವೇಳೆ ನ್ಯಾಷನಲ್ ಪ್ರೆಸ್ ಕ್ಲಬ್ ಅಧ್ಯಕ್ಷ  ಗಿಲ್ ಕ್ಲೇನ್ ಶ್ಲಾಘಿಸಿದ್ದರು.

ಬುಧವಾರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಣಾ ಅಯ್ಯುಬ್, ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯ ಉಳಿದಿಲ್ಲ ಎಂದಿದ್ದಾರೆ. "ಒಂಟಿಯಾಗಿ ಬಿಟ್ಟೆ ಎಂಬ ಭಾವನೆ ಮೂಡುವಂತಹ ಸಂದರ್ಭದಲ್ಲಿ ನಾನಿಲ್ಲಿದ್ದೇನೆ ಹಾಗೂ ನನ್ನ ಒಂಟಿತನ ಕಡಿಮೆಗೊಳ್ಳುವ ಭಾವನೆಯಿದೆ,'' ಎಂದು ಅವರು ಹೇಳಿದ್ದಾರೆ.

Similar News