ಸಾಕೇತ್‌ ಗೋಖಲೆ ಮತ್ತೆ ಬಂಧನ: ಚುನಾವಣಾ ಆಯೋಗದ ವಿರುದ್ಧ ತೃಣಮೂಲ ಆಕ್ರೋಶ

Update: 2022-12-09 05:19 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ನಕಲಿ ಟ್ವೀಟ್‌ ಪ್ರಕರಣದಲ್ಲಿ ಜಾಮೀನು ಪಡೆದ ನಂತರ  ತೃಣಮೂಲ ಪಕ್ಷದ ಸಾಕೇತ್‌ ಗೋಖಲೆ ಅವರನ್ನು ಮತ್ತೆ ಬಂಧಿಸಲಾಗಿದೆ. ಈ ಬಗ್ಗೆ ಪಕ್ಷದ ನಾಯಕ ಡೆರೆಕ್‌ ಓಬ್ರಿಯಾನ್‌ ಅವರು ಭಾರತ ಚುನಾವಣಾ ಆಯೋಗವನ್ನು’ಕೈಗೊಂಬೆ’ ಎಂದು  ದೂಷಿಸಿದ್ದಾರೆ.

ಬಿಜೆಪಿಯ ಮುಖ್ಯಮಂತ್ರಿ ಹಾಗೂ  ನಟ , ಬಿಜೆಪಿ ಸಂಸದರೊಬ್ಬರು "ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಕೋಮು ದ್ವೇಷವನ್ನು ಹರಡಿದಾಗ ಚುನಾವಣಾ ಆಯೋಗ ಇದನ್ನು ನೋಡಲೇ ಇಲ್ಲ. ಚುನಾವಣಾ ಆಯೋಗವನ್ನು ಕೈಗೊಂಬೆ ಎಂದು  ಸುಪ್ರೀಂಕೋರ್ಟ್ ಭಾವಿಸಿರುವುದು ಈಗ ನನಗೆ ಆಶ್ಚರ್ಯ ಎನಿಸುತ್ತಿಲ್ಲ" ಎಂದು ಡೆರೆಕ್ ಒ'ಬ್ರಿಯಾನ್ ಹೇಳಿದರು.

ಗುಜರಾತ್ ಪೊಲೀಸರು ದಾಖಲಿಸಿದ ಪ್ರಕರಣದಲ್ಲಿ ಜಾಮೀನು ಪಡೆದು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಚುನಾವಣೆ ಆಯೋಗಯು ಸಾಕೇತ್ ಗೋಖಲೆಯನ್ನು "ಅರೆಸ್ಟ್" ಮಾಡಿದೆ ಎಂದು ಡೆರೆಕ್ ಒ'ಬ್ರಿಯಾನ್ ಆರೋಪಿಸಿದರು, ಆದರೆ ಚುನಾವಣಾ ಆಯೋಗವು  ಬಿಜೆಪಿ ನಾಯಕರ ಆಪಾದಿತ ದ್ವೇಷ ಭಾಷಣವನ್ನು ನಿರ್ಲಕ್ಷಿಸಿದೆ ಎಂದರು.

"ಬಿಜೆಪಿ ಸಿಎಂ (ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ) ಹಾಗೂ  ನಟ, ಬಿಜೆಪಿ ಸಂಸದ(ಪರೇಶ್ ರಾವಲ್) ರೊಬ್ಬರು ಗುಜರಾತ್ ಚುನಾವಣೆಯ ಸಮಯದಲ್ಲಿ ಕೋಮು ದ್ವೇಷವನ್ನು ಹರಡಿದರು.  ಆಗ ಚುನಾವಣಾ ಆಯೋಗ ಏನು ಮಾಡುತ್ತಿತ್ತು? SaketGokhale ಅವರು ಗುಜರಾತ್ ಪೊಲೀಸರು ದಾಖಲಿಸಿದ ಒಂದು ಪ್ರಕರಣದಲ್ಲಿ ಜಾಮೀನು ಪಡೆದು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು. ಆಗ ಚುನಾವಣಾ ಆಯೋಗ ಏನು ಮಾಡಿತು ಗೊತ್ತೇ? ಅದು ಸಾಕೇತರನ್ನು  ಬಂಧಿಸಿದೆ. ಚುನಾವಣಾ ಆಯೋಗವನ್ನು ಸುಪ್ರೀಂಕೋರ್ಟ್ ಕೈಗೊಂಬೆ ಎಂದು ಭಾವಿಸಿರುವುದು ನನಗೆ ಈಗ  ಆಶ್ಚರ್ಯ ತಂದಿಲ್ಲ ” ಎಂದು ಅವರು ಒಬ್ರಿಯಾನ್ ಟ್ವೀಟ್ ಮಾಡಿದ್ದಾರೆ.

ತೃಣಮೂಲ ಕಾಂಗ್ರೆಸ್ ನಾಯಕ ಒಬ್ರಿಯಾನ್ ತಮ್ಮ ಟ್ವೀಟ್ ನಲ್ಲಿ ಬಿಜೆಪಿ ನಾಯಕರನ್ನು ಹೆಸರಿಸದಿದ್ದರೂ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೀಡಿದ್ದ  "ಲವ್ ಜಿಹಾದ್" ಬಗೆಗಿನ ಹೇಳಿಕೆ ಹಾಗೂ ಬಂಗಾಳಿಗಳ ಬಗ್ಗೆ ನೀಡಿದ್ದ ಹೇಳಿಕೆಗಳ ಕುರಿತು ಕೋಲ್ಕತ್ತಾ ಪೊಲೀಸರಿಂದ ವಿಚಾರಣೆಗೆ ಸಮನ್ಸ್ ಪಡೆದಿರುವ  ನಟ ಪರೇಶ್ ರಾವಲ್ ರನ್ನು ಉಲ್ಲೇಖಿಸಿದ್ದಾರೆ.

Similar News