ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದ ಉನ್ನತ ಸಮಿತಿ ಸಭೆಯ ವಿವರ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

Update: 2022-12-09 06:31 GMT

ಹೊಸದಿಲ್ಲಿ: ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದ ತನ್ನ ಉನ್ನತ ಸಮಿತಿಯ ಸಭೆಯ ವಿವರಗಳನ್ನು ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದ್ದು, ಈ ಚರ್ಚೆಗಳನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಘೋಷಿಸಿದೆ.

"ಕೊಲಿಜಿಯಂ ಸಭೆಗಳಲ್ಲಿ ಚರ್ಚಿಸುವ ಯಾವುದೇ ವಿಷಯ ಸಾರ್ವಜನಿಕ ಸ್ಥಳದಲ್ಲಿ ಇರುವುದಿಲ್ಲ. ಅಂತಿಮ ನಿರ್ಧಾರವನ್ನು ಮಾತ್ರ ಅಪ್‌ಲೋಡ್ ಮಾಡಬೇಕಾಗಿದೆ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಡಿಸೆಂಬರ್ 12, 2018 ರಂದು ಇಬ್ಬರು ನ್ಯಾಯಾಧೀಶರ ನೇಮಕದ ಕುರಿತು ಕೊಲಿಜಿಯಂ ಸಭೆಯ ವಿವರಗಳನ್ನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು, ಅದನ್ನು ಈ ತನಕ ಸಾರ್ವಜನಿಕಗೊಳಿಸಲಾಗಿರಲಿಲ್ಲ.

 ಅರ್ಜಿದಾರರಾದ ಸಾಮಾಜಿಕ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ವಿವರಗಳನ್ನು ಕೋರಿದ್ದರು.  ಆದರೆ ವಿವರವನ್ನು ನಿರಾಕರಿಸಲಾಯಿತು ಹಾಗೂ  ಅವರು ಈ  ನಿರ್ಧಾರವನ್ನು ಪ್ರಶ್ನಿಸಿದ್ದರು.

ಆ ಸಭೆಯಲ್ಲಿ ಹಾಜರಿದ್ದ ನ್ಯಾಯಾಧೀಶರೊಬ್ಬರ ಸಂದರ್ಶನಗಳನ್ನು ಆಧರಿತ "ಲೇಖನಗಳ ಮೇಲೆ ಅರ್ಜಿದಾರರು ಅವಲಂಬಿತರಾಗಿದ್ದಾರೆ" ಎಂಬ ವಿಚಾರವನ್ನು ನ್ಯಾಯಾಧೀಶರು ಗಮನಿಸಿದರು.

"ನಾವು ಅದರ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ನಂತರದ ನಿರ್ಣಯವು ತುಂಬಾ ಸ್ಪಷ್ಟವಾಗಿತ್ತು. ಅರ್ಜಿಯಲ್ಲಿ  ಯಾವುದೇ ಹುರುಳಿಲ್ಲ, ಅದನ್ನು ವಜಾಗೊಳಿಸಲು ಅರ್ಹವಾಗಿದೆ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.

Similar News