ಹಿಮಾಚಲ: ಸಚಿವ ಅನುರಾಗ್ ಠಾಕೂರ್ ಪ್ರತಿನಿಧಿಸುತ್ತಿರುವ ಲೋಕಸಭಾ ಕ್ಷೇತ್ರದ ಎಲ್ಲಾ 5 ಸ್ಥಾನಗಳಲ್ಲಿ ಬಿಜೆಪಿಗೆ ಸೋಲು

Update: 2022-12-09 09:53 GMT

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಪಕ್ಷವು   ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಪ್ರತಿನಿಧಿಸುತ್ತಿರುವ  ಲೋಕಸಭಾ ಕ್ಷೇತ್ರ ಹಮೀರ್‌ಪುರದ  ಎಲ್ಲಾ ಐದು ವಿಧಾನಸಭಾ ಸ್ಥಾನಗಳನ್ನು ಕಳೆದುಕೊಂಡಿದೆ.  ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ತವರು  ಜಿಲ್ಲೆ ಬಿಲಾಸ್‌ಪುರದ ಎಲ್ಲಾ ಮೂರು ಸ್ಥಾನಗಳನ್ನು ಗೆದ್ದುಕೊಂಡಿದೆ.

ಅನುರಾಗ್ ಠಾಕೂರ್ ಅವರ ತಂದೆ ಹಾಗೂ  ಮಾಜಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಅವರು ಸ್ಪರ್ಧಿಸುತ್ತಿದ್ದ ಸುಜಾನ್‌ಪುರದಿಂದ ಕಾಂಗ್ರೆಸ್ ಅಭ್ಯರ್ಥಿ ಕೇವಲ  399 ಮತಗಳ ಅಂತರದಿಂದ ಗೆದ್ದಿದ್ದಾರೆ. ಧುಮಾಲ್‌ಗೆ ಈ ಬಾರಿ  ಇಲ್ಲಿ  ಟಿಕೆಟ್ ನೀಡಲಾಗಿಲ್ಲ, ತನ್ನ ತಂದೆ ನಿವೃತ್ತಿ ಪ್ರಕಟಿಸಿದಾಗ  ಸಾರ್ವಜನಿಕವಾಗಿ ತಮ್ಮ ತಂದೆಯ "ಕಠಿಣ ಪರಿಶ್ರಮವನ್ನು ಪ್ರಶಂಸಿಸಿ"  ಅನುರಾಗ್ ಕಣ್ಣೀರು ಹಾಕಿದ್ದರು.

ಬೋರಂಜ್ ನಲ್ಲಿ ಬಿಜೆಪಿ ಕೇವಲ 60 ಮತಗಳ ಅಂತರದಿಂದ ಸೋತಿದೆ. ಹಮೀರ್‌ಪುರ ವಿಧಾನಸಭಾ ಕ್ಷೇತ್ರವು ಸ್ವತಂತ್ರ ಅಭ್ಯರ್ಥಿ ಪಾಲಾಗಿದೆ., ಆದರೆ ಬರ್ಸರ್ ಹಾಗೂ ನಾದೌನ್ ಕ್ಷೇತ್ರವನ್ನು  ಕಾಂಗ್ರೆಸ್‌ ಗೆದ್ದಿದೆ.

ನಡ್ಡಾ ಅವರ ತವರು ಬಿಲಾಸ್‌ಪುರದಲ್ಲಿ ಬಿಜೆಪಿ ಅಭ್ಯರ್ಥಿಗಳು ಎಲ್ಲಾ ಮೂರು ವಿಧಾನಸಭಾ ಸ್ಥಾನಗಳನ್ನು ಕಡಿಮೆ ಅಂತರದಿಂದ ಗೆದ್ದಿದ್ದಾರೆ.

Similar News