ಭಾರತೀಯ ಪೌರತ್ವ ತೊರೆಯುವವರ ಸಂಖ್ಯೆಯಲ್ಲಿ ಹೆಚ್ಚಳ

Update: 2022-12-09 11:48 GMT

ಹೊಸದಿಲ್ಲಿ: ಈ ವರ್ಷ ಇಲ್ಲಿಯ ತನಕ 1,83,741 ಭಾರತೀಯರು ತಮ್ಮ ಭಾರತೀಯ ಪೌರತ್ವ (Indian citizenship) ತೊರೆದಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್‌ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ

ದೇಶದಲ್ಲಿ 2017 ರಲ್ಲಿ ಪೌರತ್ವ ತೊರೆದ ಭಾರತೀಯರ ಸಂಖ್ಯೆ 1,33,049 ಆಗಿದ್ದರೆ ಈ ವರ್ಷದ ಅಕ್ಟೋಬರ್‌ 2021ರ ತನಕ 1,83,741 ಮಂದಿ ಭಾರತೀಯ ಪೌರತ್ವ ತೊರೆದಿದ್ದಾರೆ.

ಸಚಿವರು ನೀಡಿದ ಮಾಹಿತಿಯಂತೆ 2015 ರಲ್ಲಿ ಪೌರತ್ವ ತೊರೆದ ಭಾರತೀಯರ ಸಂಖ್ಯೆ 1,31,489 ಆಗಿದ್ದರೆ 2016 ರಲ್ಲಿ 1,41,603, 2017 ರಲ್ಲಿ 1,33,049, 2018 ರಲ್ಲಿ 1,34,561, 2019 ರಲ್ಲಿ 1,44,017, 2020 ರಲ್ಲಿ 85,258 ಹಾಗೂ 2021 ರಲ್ಲಿ 1,63,370 ಆಗಿತ್ತು.

ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದವರನ್ನು ಹೊರತುಪಡಿಸಿ ಭಾರತೀಯ ಪೌರತ್ವ ಪಡೆದ ವಿದೇಶೀಯರ ಸಂಖ್ಯೆಯನ್ನೂ ಸಚಿವರು ನೀಡಿದಾರೆ. ಈ ಮಾಹಿತಿಯ ಪ್ರಕಾರ 2015 ರಲ್ಲಿ 93 ವಿದೇಶೀಯರು ಭಾರತೀಯ ಪೌರತ್ವ ಪಡೆದಿದ್ದರೆ, 2016 ರಲ್ಲಿ 153, 2017 ರಲ್ಲಿ 175, 2018 ರಲ್ಲಿ 129, 2019 ರಲ್ಲಿ 113, 2020 ರಲ್ಲಿ 27, 2021 ರಲ್ಲಿ 42 ಮತ್ತು 2022 ರಲ್ಲಿ 60 ಮಂದಿ ಭಾರತೀಯ ಪೌರತ್ವ ಪಡೆದಿದ್ದಾರೆ.

Similar News