ಮಲ್ಪೆಗೆ ಕೆಲಸಕ್ಕೆ ಬಂದ ಕೇರಳದ ವ್ಯಕ್ತಿ ನಾಪತ್ತೆ
Update: 2022-12-09 20:57 IST
ಮಲ್ಪೆ, ಡಿ.9: ಮಲ್ಪೆ ಬಂದರಿಗೆ ಕೆಲಸಕ್ಕೆ ಬಂದಿದ್ದ ಕೇರಳ ರಾಜ್ಯದ ವ್ಯಕ್ತಿಯೊಬ್ಬರು ಹಲವು ತಿಂಗಳುಗಳಿಂದ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ನಾಪತ್ತೆಯಾದವರನ್ನು ಕೇರಳ ಮೂಲದ ಕೃಷ್ಣ(48) ಎಂದು ಗುರುತಿಸ ಲಾಗಿದೆ. ಇವರ ಹೆಂಡತಿ ಮಕ್ಕಳು ಹುಡುಕಿಕೊಂಡು ಮಲ್ಪೆಯಲ್ಲಿ ಬಂದಿದ್ದು, ಇವರ ಕುರಿತು ಮಾಹಿತಿ ಸಿಕ್ಕಿದಲ್ಲಿ ಮಲ್ಪೆಪೊಲೀಸ್ ಠಾಣೆಗೆ ಅಥವಾ ಈ ಮೊಬೈಲ್ ನಂಬರ್ 9663434415ಕ್ಕೆ ಕರೆ ಮಾಡುವಂತೆ ತಿಳಿಸಲಾಗಿದೆ.