ಉಡುಪಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಸಭೆ

Update: 2022-12-09 15:39 GMT

ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಸಮಿತಿಯ ಸಭೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅಧ್ಯಕ್ಷತೆಯಲ್ಲಿ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಗುರುವಾರ ಜರಗಿತು.

ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಆರ್. ಧರ್ಮಸೇನ್ ಸಭೆಯಲ್ಲಿ ಉಪಸ್ಥಿತರಿದ್ದರು. ಅವರನ್ನು ಜಿಲ್ಲಾ ಕಾಂಗ್ರೆಸ್ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಆರ್. ಧರ್ಮಸೇನ್, ಕಾಂಗ್ರೆಸ್ ಪಕ್ಷ ಪ್ರಾರಂಭದಿಂದಲೂ ಪರಿಶಿಷ್ಟ ವರ್ಗದವರಿಗೆ ರಕ್ಷಣೆ ಹಾಗೂ ವಿಶೇಷ ಸೌಲಭ್ಯಗಳನ್ನು ನೀಡಿದೆ. ಆದರೆ ಬಿಜೆಪಿ ಪರಿಶಿಷ್ಟ ಜಾತಿಗೆ ಸೇರಬೇಕಾದ ಜಾಗವನ್ನೇ ಕಬಳಿಸುವ ಪ್ರಯತ್ನದಲ್ಲಿದ್ದಾರೆ ಎಂದರು.

ಹೊಸತಾಗಿ ನೇಮಕಗೊಂಡು ಹತ್ತು ಬ್ಲಾಕ್ ಅಧ್ಯಕ್ಷರುಗಳಿಗೆ  ಧರ್ಮಸೇನ್ ಅಧಿಕಾರ ಪತ್ರ ನೀಡಿ ಗೌರವಿಸಿದರು. ಭಗವಾನ್ ಬುದ್ಧ ನ್ಯಾಷನಲ್ ಫೆಲೋಶಿಪ್ ಪಡೆದ ಭಾಸ್ಕರ್ ಪಡುಬಿದ್ರಿ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಜಯಕುಮಾರ್ ಸ್ವಾಗತಿಸಿ, ರಾಜ್ಯ ಸಮಿತಿ ಉಪಕಾರ್ಯದರ್ಶಿ ದಿನೇಶ್ ಪ್ರಾಸ್ತಾವಿಕ ಭಾಷಣ ಮಾಡಿದರು. ಅತಿಥಿ ಗಳನ್ನು ಜಿಲ್ಲಾ ಕಾಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರು ಪರಿಚಯಿಸಿದರು. ಉಡುಪಿ ಜಿಲ್ಲಾ ಸಹಕಾರಿ ಕಾಂಗ್ರೆಸ್ ಅಧ್ಯಕ್ಷ ಕೆ.ಅಣ್ಣಯ್ಯ ಸೇರಿಗಾರ್  ಕಾರ್ಯಕ್ರಮ ನಿರೂಪಿಸಿದರೆ ಭಾಸ್ಕರ್ ಪಡುಬಿದ್ರಿ ವಂದಿಸಿದರು.

ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಅಮೃತ್ ಶೆಣೈ, ಗಣೇಶ್‌ ರಾಜ್ ಸರಳೇಬೆಟ್ಟು, ಗಣೇಶ್ ನೆರ್ಗಿ, ರಾಜ್ಯಸಂಚಾಲಕ ಬಿ.ಎಂ. ಮುನಿರಾಜು, ಕಾರ್ಕಳದ ಮಾಜಿ ಪುರಸಭಾ ಅಧ್ಯಕ್ಷೆ ಪ್ರತಿಮಾ, ಶ್ಯಾಮಲಾ ಬಿ.ಕೆ. ರಾಜು, ಆನಂದ್ ಉದ್ಯಾವರ, ಯುವರಾಜ್, ಶೇಖರ್ ಹೆಜಮಾಡಿ, ಸತೀಶ್ ಮಂಚಿ, ಉಮೇಶ್ ಬನ್ನಂಜೆ ಉಪಸ್ಥಿತರಿದ್ದರು.

Similar News