ಗುಜರಾತ್: 139 ಮಹಿಳಾ ಅಭ್ಯರ್ಥಿಗಳಲ್ಲಿ 15 ಮಂದಿಗೆ ಗೆಲುವು

Update: 2022-12-09 16:07 GMT

ಅಹ್ಮದಾಬಾದ್,ಡಿ.9: ಗುಜರಾತ್ ವಿಧಾನಸಭಾ(Gujarat Assembly) ಚುನಾವಣೆಯಲ್ಲಿ ಒಟ್ಟು 15 ಮಂದಿ ಮಹಿಳಾ ಅಭ್ಯರ್ಥಿಗಳು ಜಯಗಳಿಸಿದ್ದಾರೆ. 2017ರ ವಿಧಾನಸಭಾ ಚುನಾವಣೆಯಲ್ಲಿ 13 ಮಂದಿ ಮಹಿಳೆಯರು ಜಯ ಗಳಿಸಿದ್ದರು.

15 ಮಂದಿ ವಿಜೇತ ಮಹಿಳಾ ಅಭ್ಯರ್ಥಿಗಳ ಪೈಕಿ 14 ಮಂದಿ ಬಿಜೆಪಿಗೆ ಸೇರಿದ್ದರೆ, ಇನ್ನೊಬ್ಬರು ಕಾಂಗ್ರೆಸ್(Congress) ಪಕ್ಷದವರು. ಈ ಸಲದ ಗುಜರಾತ್ ಅಸೆಂಬ್ಲಿ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳಿಂದ ಹಾಗೂ ಪಕ್ಷೇತರರಾಗಿ ಒಟ್ಟು 139 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದರು.

ಆದರೆ 2012ರ ವಿಧಾನಸಭಾ ಚುನಾವಣೆಯಲ್ಲಿ 16 ಮಹಿಳೆಯರು ಗೆಲುವು ಸಾಧಿಸಿದ್ದರು. 2017ರ ವಿಧಾನಸಬಾ ಚುನಾವಣೆಯಲ್ಲಿ 13 ಅಭ್ಯರ್ಥಿಗಳು ಗೆದ್ದರೂ, ಅವರಲ್ಲೊಬ್ಬರು 2021ರಲ್ಲಿ ನಿಧರಾದರು. ಆನಂತರ ಉಪಚುನಾವಣೆ ನಡೆಯದೆ, ಅವರ ಸ್ಥಾನ ತೆರವಾಗಿಯೇ ಉಳಿದಿತ್ತು.

ಈ ಸಲ ಬಿಚೆಪಿಯು ಒಟ್ಟು 18 ಮಹಿಳೆಯರಿಗೆ ಟಿಕೆಟ್ ನೀಡಿದ್ದರೆ, ಕಾಂಗ್ರೆಸ್ 14 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.

 ಬಿಜೆಪಿಯ ವಿಜೇತ ಮಹಿಳಾ ಅಭ್ಯರ್ಥಿಗಳಾ ಸಂಗೀತಾ ಪಾಟೀಲ್ (ಲಿಂಬಾಯತ್ ಕ್ಷೇತ್ರ),ಬಾನುಬೆನ್ ಬಬಾರಿಯಾ (ರಾಜಕೋಟ್ ಗ್ರಾಮೀಣ) ಅವರು ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಸಿ.ಆರ್.ಪಾಟೀಲ್ ಅವರ ನಾಯಕತ್ವ ಹಮತ್ತು ಪಕ್ಷದ ಕಾರ್ಯಕರ್ತರ ಕಠಿಣ ಪರಿಶ್ರಮ ಕಾರಣವೆಂದು ಹೇಳಿದ್ದಾರೆ.

Similar News