ಭಾರತದಲ್ಲಿ ಪಾಕ್ ಚಿತ್ರದ ಬಿಡುಗಡೆಗೆ ಅವಕಾಶ ನೀಡುವುದಿಲ್ಲ: ಎಂಎನ್‌ಎಸ್ ಬೆದರಿಕೆ

Update: 2022-12-09 16:38 GMT

ಹೊಸದಿಲ್ಲಿ,ಡಿ.10: ಫಾವದ್ ಖಾನ್ (Fawad Khan)ಅಭಿನಯದ ಪಾಕಿಸ್ತಾನಿ ಚಿತ್ರ ‘ ದಿ ಲೆಜೆಂಡ್ ಆಫ್ ಮೌಲಾ ಜಾಟ್’(The Legend of Maula Jat) ಭಾರತದಲ್ಲಿ ಬಿಡುಗಡೆಯಾಗಲು ತನ್ನ ಪಕ್ಷ ಅವಕಾಶ ನೀಡುವುದಿಲ್ಲವೆಂದು ಮಹಾರಾಷ್ಟ್ರ ನವನಿರ್ಮಾಣ ಸೇನಾ (MNS) ಅಧ್ಯಕ್ಷ ಅಮೇಯ ಕೊಪ್ಕರ್(Ameya Kopkar) ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.

 ‘‘ ಪಾಕ್ ನಟ ಫಾವದ್ ಖಾನ್ ಅಭಿನಯದ ಪಾಕಿಸ್ತಾನಿ ಚಿತ್ರ ‘ ದಿ ಲೆಜೆಂಡ್ ಆಫ್ ಮೌಲಾ ಜಾಟ್’ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಯೋಜನೆಗಳು ನಡೆಯುತ್ತಿವೆ. ಈ ಯೋಜನೆಯ ನೇತೃತ್ವವನ್ನು ಭಾರತೀಯ ಕಂಪೆನಿಯೊಂದು ಮುನ್ನಡೆಸುತ್ತಿರುವುದು ಅತ್ಯಂತ ಆಕ್ರೋಶವನ್ನುಂಟು ಮಾಡಿದೆ. ರಾಜ್ ಸಾಹೇಬ್ (ರಾಜ್ ಠಾಕ್ರೆ) ಅವರ ಆದೇಶದಂತೆ ನಾವು ಭಾರತದಲ್ಲೆಲ್ಲೂ ಈ ಚಿತ್ರದ ಬಿಡುಗಡೆಗೆ ಅವಕಾಶ ನೀಡುವುದಿಲ್ಲ’’ ಎಂದು ಕೊಪ್ಕರ್ ಟ್ವೀಟಿಸಿದ್ದಾರೆ.

 ಭಾರತದಲ್ಲಿರುವ ಫಾವದ್‌ಖಾನ್ ಅವರ ಅಭಿಮಾನಿಗಳನ್ನು ದೇಶದ್ರೋಹಿಗಳೆಂದೂ, ಸ್ವತಃ ಚಿತ್ರ ನಿರ್ಮಾಪಕರಾದ ಕೊಪ್ಕರ್ ಬಣ್ಣಿಸಿದ್ದಾರೆ. ಫಾವದ್‌ಖಾನ್‌ರ ದೇಶದ್ರೋಹಿ ಅಭಿಮಾನಿಗಳು ಪಾಕಿಸ್ತಾನಕ್ಕೆ ಹೋಗಿ ಅರ ಚಿತ್ರವನ್ನು ನೋಡಲಿ’’ ಎಂದು ಟ್ವೀಟ್ ಮಾಡಿದ್ದಾರೆ. ‘ದಿ ಲೆಜೆಂಡ್ ಆಫ್ ಮೌಲಾ ಜಾಟ್’ ಪಾಕಿಸ್ತಾನ ಸಿನೆಮಾರಂಗದ ಇತಿಹಾಸದಲ್ಲೇ ಅತಿ ದೊಡ್ಡ ಬಜೆಟ್‌ನ ಚಿತ್ರವಾಗಿದ್ದು, ಫಾವದ್ ಖಾನ್ ಹಾಗೂ ಮಹಿರಾ ಖಾನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

Similar News