ಗಡಿವಿವಾದ: ಡಿ.14 ರಂದು ಅಮಿಶ್ ಶಾ ರಿಂದ ಕರ್ನಾಟಕ, ಮಹಾರಾಷ್ಟ್ರ ಸಿಎಂಗಳ ಸಭೆ

Update: 2022-12-09 17:34 GMT

ಹೊಸದಿಲ್ಲಿ,ಡಿ.9: ಗಡಿ ವಿವಾದಕ್ಕೆ ಸಂಬಂಧಿಸಿ ಉಭಯ ರಾಜ್ಯಗಳ ನಡುವೆ ತಲೆದೋರಿರುವ ಉದ್ವಿಗ್ನತೆಯನ್ನು ಶಮನಗೊಳಿಸುವ ಪ್ರಯತ್ನವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah)ಅವರು ಡಿಸೆಂಬರ್ 14ರಂದು ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆದಿದ್ದಾರೆಂದು ಎನ್‌ಸಿಪಿ ನಾಯಕ ಅಮೋಲ್ ಕೊಲ್ಹೆ (Amol Kolhe)ತಿಳಿಸಿದರು.

 ಹೊಸದಿಲ್ಲಿಯಲ್ಲಿ ಮಹಾರಾಷ್ಟ್ರ ವಿಕಾಸ್ ಅಘಾಡಿ (MVA)ಯ ಸಂಸದರ ನಿಯೋಗವೊಂದು ಅಮಿತ್ ಶಾ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಈ ಮಾಹಿತಿ ನೀಡಿದ್ದಾರೆ.

 ಮಹಾರಾಷ್ಟ್ರ ಹಾಗೂ ಕರ್ನಾಟಕ ನಡುವೆ ಗಡಿವಿವಾದ ಯಾವ ಮಟ್ಟಕ್ಕೆ ತಲುಪಿದೆಯೆಂದರೆ ಅದು ಪೂರ್ಣಪ್ರಮಾಣದ ಹಿಂಸಾಚಾರವಾಗಿ ಭುಗಿಲೇಳುವ ಹಂತಕ್ಕೆ ತಲುಪಿದೆಯೆಂದು ನಿಯೋಗವು ಆತಂಕ ವ್ಯಕ್ತಪಡಿಸಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ (Eknath Shinde)ಹಾಗೂ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai)ಅವರೊಂದಿಗೆ ಡಿಸೆಂಬರ್ 14ರಂದು ಮಾತುಕತೆ ನಡೆಸುವುದಾಗಿ ಅಮಿತ್ ಶಾ ತಿಳಿಸಿದ್ದಾರೆಂದು ಕೊಲ್ಹೆ ಹೇಳಿದ್ದಾರೆ.

ಕೊಲ್ಹೆ ಅವರು ಮಹಾರಾಷ್ಟ್ರದ ಶಿರೂರು ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ.

Similar News