ಎನ್‍ಡಿಟಿವಿಗೆ "ಏಷ್ಯಾದ ಅತ್ಯುತ್ತಮ ಮಾಧ್ಯಮ ಕಂಪೆನಿ" ಪ್ರಶಸ್ತಿ

Update: 2022-12-10 03:45 GMT

ಹೊಸದಿಲ್ಲಿ: ಏಷ್ಯಾದ ಅತ್ಯಂತ ಪ್ರತಿಷ್ಠಿತ ಕಾರ್ಪೊರೇಟ್ ಪ್ರಶಸ್ತಿಯಾದ, "ಏಷ್ಯಾದ ಅತ್ಯುತ್ತಮ ಮಾಧ್ಯಮ ಕಂಪೆನಿ" (Asia's Best Media Company) ಪ್ರಶಸ್ತಿಗೆ ಎನ್‍ಡಿಟಿವಿ (NDTV) ಭಾಜನವಾಗಿದೆ.

ಮಾಧ್ಯಮ ನಾಯಕತ್ವ, ವ್ಯವಹಾರ ಸಂಹಿತೆ ಮತ್ತು ಮಾರುಕಟ್ಟೆ ಪಾಲು ಅಥವಾ ಪ್ರಭಾವಕ್ಕಾಗಿ ಎನ್‍ಡಿಟಿವಿಗೆ ಈ ಪ್ರಶಸ್ತಿ ಸಂದಿದೆ. ಅಮೆರಿಕದ ಬರ್ಕ್‍ಶೈರ್ ಮೀಡಿಯಾ (ಬ್ರಾಂಡ್ ಮತ್ತು ಮರಾಟ ಸಂಶೋಧನೆಯ ತಜ್ಞ ಸಂಸ್ಥೆ) Berkshire Media, USA (specialists in Brand and Market Research), ಈ ಪ್ರಶಸ್ತಿಯನ್ನು ನೀಡುತ್ತದೆ ಎಂದು ndtv.com ವರದಿ ಮಾಡಿದೆ.

ಎನ್‍ಡಿಟಿವಿ "ಏಷ್ಯಾದ ಅತ್ಯಂತ ವಿಶ್ವಾಸಾರ್ಹ ಮಾಧ್ಯಮ" ಪ್ರಶಸ್ತಿಯನ್ನೂ ಗಳಿಸಿದ್ದು, ಎನ್‍ಡಿಟಿವಿಯ ಅನುಶೋಧನೆ, ಘನತೆ ಮತ್ತು ಕಾರ್ಯಕ್ರಮಗಳಿಗೆ ಈ ಪುರಸ್ಕಾರ ಸಂದಿದೆ ಎಂದು ಪ್ರಕಟನೆ ತಿಳಿಸಿದೆ.

ಲಕ್ಷಾಂತರ ವೀಕ್ಷಕರು ಮತ್ತು ಆನ್‍ಲೈನ್ ಬಳಕೆದಾರರಿಗೆ ಕೃತಜ್ಞತೆ ಸಲ್ಲಿಸಿರುವ ಕಂಪೆನಿ, ಸುದ್ದಿವಾಹಿನಿಯಾಗಿ ನಿಮ್ಮ ವಿಶ್ವಾಸಕ್ಕಿಂತ ದೊಡ್ಡದು ಯಾವುದೂ ಅಲ್ಲ ಎಂದು ಹೇಳಿದೆ. ಎನ್‍ಡಿಟಿವಿ ಅಧ್ಯಕ್ಷೆ ಸುಪರ್ಣಾ ಸಿಂಗ್ ಅವರು, ಅತ್ಯುತ್ತಮ ಅಂತರರಾಷ್ಟ್ರೀಯ ಮಾಧ್ಯಮ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ ಎಂದು ndtv.com ವರದಿ ಮಾಡಿದೆ.

Similar News