ಹಾಲಿವುಡ್ ಅಂಗಳದಲ್ಲಿ ರಾಜಮೌಳಿ ಚಿತ್ರ: ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳ ಎರಡು ವಿಭಾಗಕ್ಕೆ ನಾಮ ನಿರ್ದೇಶನಗೊಂಡ RRR

Update: 2022-12-12 18:00 GMT

ಹೊಸದಿಲ್ಲಿ: ಹಾಲಿವುಡ್ ನ ಪ್ರಮುಖ ಪ್ರಶಸ್ತಿಗೆ ನಾಮ ನಿರ್ದೇಶನಗೊಳ್ಳುವುದರೊಂದಿಗೆ ರಾಜಮೌಳಿ ನಿರ್ದೇಶನದ RRR ಚಿತ್ರ ಜಾಗತಿಕವಾಗಿ ಹೊಸ ಮೈಲಿಗಲ್ಲು ತಲುಪಿದೆ. 

ಎಸ್‌ಎಸ್ ರಾಜಮೌಳಿ ನಿರ್ದೇಶನದ RRR ಚಲನಚಿತ್ರವು ಜನವರಿಯಲ್ಲಿ ನಡೆಯಲಿರುವ ಗೋಲ್ಡನ್ ಗ್ಲೋಬ್ (Golden Globes) ಪ್ರಶಸ್ತಿಗಳಲ್ಲಿ ಎರಡು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ. 

ಇಂಗ್ಲಿಷ್ ಭಾಷೇತರ ಚಿತ್ರಗಳ ವಿಭಾಗದಲ್ಲಿ ಅತ್ಯುತ್ತಮ ಭಾಷಾ ಚಲನಚಿತ್ರ  ಹಾಗೂ (ನಾಟು ನಾಟು) ಅತ್ಯುತ್ತಮ ಮೂಲ ಹಾಡು ವಿಭಾಗದಲ್ಲಿ ಗೋಲ್ಡನ್‌ ಗ್ಲೋಬ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದೆ.  
 
ನಿಜ ಜೀವನದ ಕ್ರಾಂತಿಕಾರಿಗಳಾದ ಕೊಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಅವರ ಜೀವನವನ್ನು ಆಧರಿಸಿದ RRR, ಪ್ರಪಂಚದಾದ್ಯಂತ ಹಲವಾರು ಅಭಿಮಾನಿಗಳನ್ನು ಸೃಷ್ಟಿಸಿದೆ.

RRR ನಲ್ಲಿ ರಾಮ್ ಚರಣ್ ಮತ್ತು ಜೂನಿಯರ್ NTR ಅವರು ರಾಜು ಮತ್ತು ಭೀಮ್ ಪಾತ್ರದಲ್ಲಿ ನಟಿಸಿದ್ದಾರೆ.  ಆಲಿಯಾ ಭಟ್, ಅಜಯ್ ದೇವಗನ್ ಮತ್ತು ಶ್ರಿಯಾ ಶರನ್ ಬ್ರಿಟಿಷ್ ನಟರಾದ ರೇ ಸ್ಟೀವನ್ಸನ್ ಮತ್ತು ಅಲಿಸನ್ ಡೂಡಿ ಕೂಡಾ ಚಿತ್ರದಲ್ಲಿ ನಟಿಸಿದ್ದಾರೆ.

ಭಾರತೀಯ ಚಿತ್ರಗಳಾದ ಕಾಂತಾರ, ಗಂಗೂಬಾಯಿ ಕಥಿಯವಾಡಿ, ಛೆಲೋ ಷೊ ಮೊದಲಾದ ಚಿತ್ರಗಳು ರೇಸಿನಲ್ಲಿತ್ತಾದರೂ ಅವುಗಳನ್ನೆಲ್ಲಾ ಮೀರಿ RRR ಅಂತಿಮವಾಗಿ ನಾಮ ನಿರ್ದೇಶನಗೊಂಡಿದೆ.

Similar News