ಸಂಪುಟ ಸ್ಥಾನ ಪಡೆಯಲು ಪೈಪೋಟಿ: ಹಿಮಾಚಲ ಶಾಸಕರನ್ನು ರಾಜಸ್ಥಾನಕ್ಕೆ ಕರೆಸಿದ ರಾಹುಲ್ ಗಾಂಧಿ

Update: 2022-12-13 02:24 GMT

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಸಂಪುಟ ಸ್ಥಾನ ಪಡೆಯಲು ಕಾಂಗ್ರೆಸ್ ಶಾಸಕರಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿರುವ ಬೆನ್ನಲ್ಲೇ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪಕ್ಷದ ಶಾಸಕರನ್ನು ರಾಜಸ್ಥಾನಕ್ಕೆ ಕರೆಸಿಕೊಂಡಿದ್ದಾರೆ ಎಂದು timesofindia.com ವರದಿ ಮಾಡಿದೆ.

ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆ ಮರುಭೂಮಿ ರಾಜ್ಯದ ಮೂಲಕ ಹಾದುಹೋಗುತ್ತಿದ್ದು, ಎಲ್ಲ ನೂತನ ಶಾಸಕರು ಈ ಯಾತ್ರೆಗೆ ಕೈಜೋಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಪುಟ ರಚನೆ ಇನ್ನೂ ಕೆಲ ದಿನಗಳ ಕಾಲ ವಿಳಂಬವಾಗಲಿದ್ದು, ಈ ತಿಂಗಳ 15ರ ವೇಳೆಗೆ ಅಂತಿಮಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಸಿಎಂ ಹಾಗೂ ಉಪ ಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿಯವರು ಸೆಕ್ರೇಟ್ರಿಯೇಟ್‍ನಲ್ಲಿ ಸುದೀರ್ಘ ಸಭೆ ನಡೆಸಿದರು. ಆದರೆ ಸಭೆಯ ಫಲಿತಾಂಶದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ರಾಜ್ಯ ನಾಯಕತ್ವಕ್ಕೆ ರಾಹುಲ್ ಅವರ ಕರೆ ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಸಿಎಂ ಸುಖು ಅವರು ಮೂಲತಃ ಹಮೀರ್‍ಪುರ ಜಿಲ್ಲೆಯವರಾಗಿದ್ದು, ಕಾಂಗ್ರೆಸ್ ಇಲ್ಲಿ ಎಲ್ಲ ಐದು ಸ್ಥಾನಗಳನ್ನು ಗೆದ್ದುಕೊಂಡಿದೆ. ಸುಜ್ಞಾನಪುರ ಶಾಸಕ ರಾಜೀಂದರ್ ರಾಣಾ ಸಿಎಂ ಅವರ ಜಿಲ್ಲೆಗೇ ಸೇರಿರುವ ಆಧಾರದಲ್ಲಿ ಸಂಪುಟದ ಸ್ಥಾನಕ್ಕೆ ತೀವ್ರ ಲಾಬಿ ನಡೆಸಿದ್ದಾರೆ. ಬಿಜೆಪಿ 2007 ರಿಂದ 2012ರವರೆಗೆ ಅಧಿಕಾರದಲ್ಲಿದ್ದ ಅವಧಿಯಲ್ಲಿ ಪ್ರೇಮ್ ಕುಮಾರ್ ಧಮಾಲ್ ಹಾಗೂ ಅವರ ಶಿಕ್ಷಣ ಸಚಿವ ಈಶ್ವರ್‍ದಾಸ್ ಧೀಮನ್ ಹಮೀರ್‍ಪುರ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದರು ಎಂದು timesofindia.com ವರದಿ ಮಾಡಿದೆ.

Similar News