​ಅಕ್ರಮ ಮರಳು ಸಾಗಾಟ ಆರೋಪ: ಲಾರಿ ವಶ

Update: 2022-12-13 15:59 GMT

ಕೋಟ, ಡಿ.13: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಆರೋಪದಲ್ಲಿ ಲಾರಿಯನ್ನು ಕೋಟ ಕಂದಾಯ ನಿರೀಕ್ಷಕ ವಶಕ್ಕೆ ಪಡೆದ ಘಟನೆ ಡಿ.13ರಂದು ಕೋಟ ಗಣೇಶ್ ಗ್ರಾಂಡ್ ಹೊಟೇಲ್ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಗಂಗೊಳ್ಳಿ  ಮೊವ್ವಾಡಿಯ ದಕ್ಕೆಯಿಂದ ಉಡುಪಿ ಕಡೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ವಶಪಡೆದುಕೊಳ್ಳಲಾಗಿದೆ. ಲಾರಿ ಚಾಲಕನನ್ನು ಫಕೀರಪ್ಪ ಹೊಸಮನಿ  ಎಂದು ಗುರುತಿಸಲಾಗಿದೆ. ಲಾರಿಯಲ್ಲಿದ್ದ 10 ಸಾವಿರ ರೂ. ಮೌಲ್ಯದ 2 ಯುನಿಟ್ ಮರಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News