2020 ಮತ್ತು 2022ರ ನಡುವೆ ದೇಶದಲ್ಲಿ ಕ್ಯಾನ್ಸರ್‌ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ: ಸರ್ಕಾರ

Update: 2022-12-13 17:18 GMT

ಹೊಸದಿಲ್ಲಿ: 2020 ಮತ್ತು 2022 ರ ನಡುವೆ ದೇಶದಲ್ಲಿ ಅಂದಾಜು ಕ್ಯಾನ್ಸರ್ (Cancer) ಪ್ರಕರಣಗಳು ಮತ್ತು ಮರಣ ಪ್ರಮಾಣ ಹೆಚ್ಚಾಗಿದೆ ಎಂದು ಅಧಿಕೃತ ಅಂಕಿಅಂಶಗಳನ್ನು ಉಲ್ಲೇಖಿಸಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Union Health Minister Mansukh Mandaviya) ಮಂಗಳವಾರ ರಾಜ್ಯಸಭೆಗೆ ತಿಳಿಸಿದರು.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ನ ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಪ್ರಕಾರ, 2020 ರಲ್ಲಿ ಭಾರತದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕ್ಯಾನ್ಸರ್ ಪ್ರಕರಣಗಳ ಅಂದಾಜು ಸಂಖ್ಯೆ 13,92,179 ಆಗಿದ್ದು, 2021 ರಲ್ಲಿ 14,26,447 ಕ್ಕೆ ಏರಿದೆ. ಮತ್ತು 2022 ರಲ್ಲಿ 14,61,427 ಕ್ಕೆ ಏರಿದೆ ಎಂದು ಮಾಂಡವಿಯಾ ತಿಳಿಸಿದ್ದಾರೆ.

ಭಾರತದಲ್ಲಿ 2020 ರಲ್ಲಿ ಕ್ಯಾನ್ಸರ್‌ ಮರಣ ಪ್ರಮಾಣ 7,70,230 ಆಗಿದ್ದು, 2021 ರಲ್ಲಿ 7,89,202 ಮತ್ತು 2022 ರಲ್ಲಿ 8,08,558 ಕ್ಕೆ ಏರಿಕೆಯಾಗಿದೆ ಎಂದು ಮಾಂಡವಿಯಾ ತಿಳಿಸಿದ್ದಾರೆ.

Similar News