ವಿಮಾನ ನಿಲ್ದಾಣಗಳಲ್ಲಿ ಜನ ದಟ್ಟಣೆ ಹಿನ್ನೆಲೆ: ಸಾಕಷ್ಟು ಸಿಬ್ಬಂದಿ ನಿಯೋಜಿಸಲು ವಿಮಾನಯಾನ ಸಚಿವಾಲಯ ಸೂಚನೆ

Update: 2022-12-14 09:24 GMT

ಹೊಸದಿಲ್ಲಿ: ವಿಮಾನ ನಿಲ್ದಾಣಗಳಲ್ಲಿ ಜನ ದಟ್ಟಣೆಯ ದೂರುಗಳ ಹಿನ್ನೆಲೆಯಲ್ಲಿ  ಚೆಕ್-ಇನ್ ಹಾಗೂ ಬ್ಯಾಗೇಜ್ ಡ್ರಾಪ್ ಕೌಂಟರ್‌ಗಳಲ್ಲಿ ಸಾಕಷ್ಟು ಸಿಬ್ಬಂದಿಯನ್ನು ನಿಯೋಜಿಸಲು ವಿಮಾನಯಾನ ಸಚಿವಾಲಯ ಮಂಗಳವಾರ ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಿದೆ.

"ಕೆಲವು ವಿಮಾನ ನಿಲ್ದಾಣಗಳಲ್ಲಿನ ಏರ್‌ಲೈನ್ ಚೆಕ್-ಇನ್ ಕೌಂಟರ್‌ಗಳು ಮುಂಜಾನೆ ಸಮಯದಲ್ಲಿ ಯಾವುದೆ ಸಿಬ್ಬಂದಿ ಇಲ್ಲದಿರುವುದು ಅಥವಾ ಅಸಮರ್ಪಕವಾಗಿ ಸಿಬ್ಬಂದಿಯನ್ನು ಹೊಂದಿರುವುದು ವಿಮಾನ ನಿಲ್ದಾಣಗಳಲ್ಲಿ ದಟ್ಟಣೆಗೆ ಕಾರಣವಾಗುತ್ತದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಗಮನಕ್ಕೆ ಬಂದಿದೆ" ಎಂದು ಸಚಿವಾಲಯ ತನ್ನ ಸೂಚನೆಯಲ್ಲಿ ತಿಳಿಸಿದೆ.

ಆಯಾ ವಿಮಾನ ನಿಲ್ದಾಣಗಳ ಪ್ರವೇಶ ದ್ವಾರಗಳಲ್ಲಿ ಕಾಯುವ ಸಮಯದ ಬಗ್ಗೆ ನೈಜ-ಸಮಯದ ಡೇಟಾವನ್ನು ತಮ್ಮ ಸಾಮಾಜಿಕ ಮಾಧ್ಯಮ ಫೀಡ್‌ಗಳಲ್ಲಿ ಹಂಚಿಕೊಳ್ಳಲು ಸಚಿವಾಲಯವು  ಏರ್‌ಲೈನ್‌ಗಳಿಗೆ ವಿನಂತಿಸಿದೆ.

Similar News