ಸಿಬಿಐ ತನಿಖೆಗೆ ಸಾಮಾನ್ಯ ಅನುಮತಿ ಹಿಂಪಡೆದ 9 ರಾಜ್ಯಗಳು: ಕೇಂದ್ರದಿಂದ ಮಾಹಿತಿ

Update: 2022-12-14 12:39 GMT

ಹೊಸದಿಲ್ಲಿ: ತೆಲಂಗಾಣ ಮತ್ತು ಮೇಘಾಲಯ ಸೇರಿದಂತೆ ಒಂಬತ್ತು ರಾಜ್ಯಗಳು  ಕೆಲವೊಂದು ಅಪರಾಧಗಳಿಗಾಗಿ  ಸಿಬಿಐ (CBI) ತನಿಖೆಗೆ ನೀಡಿರುವ ಸಾಮಾನ್ಯ ಅನುಮತಿಯನ್ನು ವಾಪಸ್‌ ಪಡೆದುಕೊಂಡಿವೆ ಎಂದು ಕೇಂದ್ರ ಗೃಹ ಸಚಿವ ಜಿತೇಂದ್ರ ಸಿಂಗ್‌ ಲೋಕಸಭೆಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.

ಸಿಬಿಐ ತನಿಖೆಗೆ ಅನುಮತಿ ವಾಪಸ್‌ ಪಡೆದ ರಾಜ್ಯಗಳಲ್ಲಿ ಛತ್ತೀಸಗಢ, ಮಿಝೋರಾಂ, ಪಂಜಾಬ್‌, ರಾಜಸ್ಥಾನ, ಕೇರಳ, ಜಾರ್ಖಂಡ್‌ ಮತ್ತು ಪಶ್ಚಿಮ ಬಂಗಾಳ ಸೇರಿವೆ ಎಂದು ಸಚಿವರು ತಿಳಿಸಿದರು.

ದಿಲ್ಲಿ ಪೊಲೀಸ್‌ ಎಸ್ಟಾಬ್ಲಿಷ್ಮೆಂಟ್‌ ಕಾಯಿದೆ 1946 ಪ್ರಕಾರ  ಆಯಾ ರಾಜ್ಯಗಳ್ಲಲಿ ತನಿಖೆ ನಡೆಸಲು ಆ ರಾಜ್ಯಗಳ ಅನುಮತಿ ಸಿಬಿಐಗೆ ಅಗತ್ಯವಿದೆ ಎಂದು ಸಚಿವರು ತಿಳಿಸಿದರು.

Similar News